Breaking News

40 ವರ್ಷಗಳ ಅನುಭವ ಹೊಂದಿದ ಭಾರತ ವಾಹನ ತರಬೇತಿ ಶಾಲೆ ಆರಂಭ

Spread the love

೪೦ ವರ್ಷಗಳ ಅನುಭವ ಹೊಂದಿದ್ದ ಭಾರತ ವಾಹನ ತರಬೇತಿ ಶಾಲೆ ಸಮಾಜಮುಖಿ ಕೆಲಸ ಮಾಡುತ್ತಿದೆ ಮುಂಚೆ ದೇಶಸೇವೆ ಮಾಡಿದ್ದೇನೆ ಈ ವೃತ್ತಿಯಲ್ಲಿ ಅನೇಕ ಏರಳಿತಗಳನ್ನು ನೋಡಿದ್ದೇನೆ ಅಪಘಾತ ರಹಿತ ತರಬೇತಿ ನೀಡುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿದ್ದೇನೆ ಎಂದು ಭಾರತ ವಾಹನ ತರಬೇತಿ ಮಾಲೀಕ ಬಸವರಾಜ ಕಡ್ಲಿ ಹೇಳಿದರು .

ಬೆಳಗಾವಿ ನೆಹರು ನಗರದ ೨ ನೇ ಕ್ರಾಸನಲ್ಲಿ ಭಾರತ ವಾಹನ ತರಬೇತಿ ಶಾಲೆಯ ಭವ್ಯ ಉದ್ಘಾಟನೆಯನ್ನು ಬೆಳಗಾವಿ ನಾಗನೂರ ಮಠದ ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ನೆರವೇರಿಸಿದರು .

ಭಾರತ ವಾಹನ ತರಬೇತಿ ಮಾಲೀಕ ಬಸವರಾಜ ಕಡ್ಲಿ ಮಾತನಾಡುತ್ತ ನಮ್ಮ ಫೆಡರೇಷನ್ ತುಂಬಾ ಸಮಾಜಮುಖಿ ಕೆಲಸ ಮಾಡುತ್ತಿದೆ ನಾವು ಭಾರತವನ್ನು ಸಂಚರಿಸಿ ಬಂದಿದ್ದೇನೆ ಸುಮಾರು ಕಡೆ ನಾನು ವಾಹನ ತರಬೇತಿ ಶಾಲೆಗಳನ್ನು ನೋಡಿದ್ದೇನೆ ನಮ್ಮ ವಾಹನ ತರಬೇತಿ ಶಾಲೆ ಮಟ್ಟ ಕೆಳಗೆ ಇತ್ತು ಎಂದು ಅನಿಸಿತು ಅದನ್ನು ಮನದಲ್ಲಿಟ್ಟುಕೊಂಡು ನಮ್ಮ ಶಾಲೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಬೇಕೆಂದು ಹೊರಟ್ವಿ ನಮ್ಮ ಸ್ನೇಹಿತ ಶ್ರೀಶೈಲ್ ಠಕ್ಕಣ್ಣವರ್ ,ಸಚಿನ ,ಮಲ್ಲಿಕ ಮತ್ತು ಅಜಯಕುಮಾರ ನಾಲ್ಕು ಜನಾ ನನಗೆ ಸಾಥ್ ನೀಡಿದರು ಇವರೆಲ್ಲರ ಪರಿಶ್ರಮದಿಂದಾಗಿ ನಮ್ಮ ರಾಜ್ಯದ ಅಧ್ಯಕ್ಷರು ಹೊಗಳುವಂತಾಗಿದೆ . ನಮ್ಮಲ್ಲಿ ತರಬೇತಿಗೆ ಬರುವವರಿಗೆ ಅಪಘಾತ ರಹಿತ ತರಬೇತಿ ನೀಡುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿದ್ದೇನೆ ಅದೇ ರೀತಿ ನಮ್ಮ ಸಿಬ್ಬಂದಿಗಳು ಒಳ್ಳೆಯ ರೀತಿ ತರಬೇತಿಯನ್ನು ನೀಡುತ್ತಿದ್ದಾರೆ ೪೦ ವರ್ಷಗಳ ಅನುಭವ ಹೊಂದಿದ್ದ ಈ ಶಾಲೆ ,ಕೆ ಎಸ ನಾಯಿಕ ಎಂಬವರ ಮಾಲೀಕತ್ವದಲ್ಲಿ ಈ ಕಂಪನಿ ಇತ್ತು ನಾನು ಎರಡನೇ ಮಾಲೀಕ ನಾನು ೨೦೦೨ ರಲ್ಲಿ ಈ ವೃತ್ತಿಯಲ್ಲಿ ಬಂದೆ ಅದಕ್ಕಿಂತ ಮುಂಚೆ ದೇಶಸೇವೆ ಮಾಡಿದ್ದೇನೆ ಈ ವೃತ್ತಿಯಲ್ಲಿ ಅನೇಕ ಏರು ಇಳಿತಗಳನ್ನು ನೋಡಿದ್ದೇನೆ ಬೆಳಗಾವಿ ಜನರು ಉತ್ತಮ ತರಬೇತಿಗಾಗಿ ನಮ್ಮ ಶಾಲೆಯಲ್ಲಿ ತರಬೇತಿ ಪಡೆಯಿರಿ ಸಂಚಾರ ನಿಯಮಗಳನ್ನು ಪಾಲಿಸಿ ಹೆಲ್ಮೆಟ್ ಹಾಗು ಸಿಟ್ ಬೆಲ್ಟ್ ಧರಿಸಿ ಸಂಚಾರ ಮಾಡಿದರೆ ಅಪಘಾತಗಳು ನಡೆಯಲಾರದು ಎಂದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ