Breaking News

ಭಾರತದ ಬಿರುಗಾಳಿ ಬೌಲಿಂಗ್​ಗೆ ಪತರುಗುಟ್ಟಿದ ಸಿಂಹಳೀಯರು ಟೀಂ ಇಂಡಿಯಾ ಭರ್ಜರಿ ಗೆಲುವು

Spread the love

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್​ ಶರ್ಮಾ ಬಳಗ ಗೆಲುವಿನ ಕೇಕೆ ಹಾಕಿದೆ. ಈ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಸತತ 7ನೇ ಜಯ ದಾಖಲಿಸಿದೆ.

ಮುಂಬೈ (ಮಹಾರಾಷ್ಟ್ರ): ಶ್ರೀಲಂಕಾದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ.

ರೋಹಿತ್​ ಶರ್ಮಾ ಪಡೆಯ ಬಿರುಗಾಳಿ ಬೌಲಿಂಗ್​ ದಾಳಿಗೆ ಸಿಂಹಳೀಯರು ಪತರುಗುಟ್ಟಿದ್ದು, ಲಂಕಾ ಆಟಗಾರರು ಕೇವಲ 55 ರನ್​ಗಳಿಗೆ ಸರ್ವಪತನ ಕಂಡಿದ್ದಾರೆ. ಇದರಿಂದ ಭಾರತ ತಂಡ ದಾಖಲೆಯ 302 ರನ್​ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ವಿಶ್ವಕಪ್​ ಟೂರ್ನಿಯಲ್ಲಿ ಸತತ 7ನೇ ಗೆಲುವಿನ ಕೇಕೆ ಹಾಕಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ತಂಡ ಮೊದಲ ಬ್ಯಾಟಿಂಗ್​ ಮಾಡಿ ಎಂಟು ವಿಕೆಟ್​ ನಷ್ಟಕ್ಕೆ 357 ರನ್​ಗಳು ಬೃಹತ್​ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಲಂಕಾ ಆಟಗಾರರ ಮೇಲೆ ಆರಂಭದಲ್ಲೇ ಟೀಂ ಇಂಡಿಯಾದ ಬೌಲರ್​ಗಳು ಸವಾರಿ ಮಾಡಿದರು. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್​ಗೆ ಪಟಪಟನೆ ವಿಕೆಟ್​ಗಳು ಉರುಳಿದವು. ಇದರಿಂದ 15 ರನ್​ಗಳು ಆಗುಷ್ಟರಲ್ಲಿ ಲಂಕಾ ಪ್ರಮುಖ ಆರು ವಿಕೆಟ್​ಗಳನ್ನು ಕಳೆದುಕೊಂಡಿತು.


Spread the love

About Laxminews 24x7

Check Also

ಬಿಎಂಐಸಿ ಯೋಜನೆಯನ್ನು ಮರುಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

Spread the loveಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್‌ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು ಮೈಸೂರು ಮೂಲ ಸೌಕರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ