Breaking News

2025 ರ ಮಹಾಕುಂಭಕ್ಕೂ ಮೊದಲು ತ್ರಿವೇಣಿ ಪುಷ್ಪದಲ್ಲಿ 108 ಅಡಿ ಎತ್ತರದ ಹನುಮನ ವಿಗ್ರಹ ಪ್ರತಿಷ್ಠಾಪನೆ

Spread the love

ಪ್ರಯಾಗರಾಜ್ (ಉತ್ತರ ಪ್ರದೇಶ): ಪ್ರಯಾಗ್​ರಾಜ್​ನಲ್ಲಿ ‘ನಾಗರ್ ಕೊತ್ವಾಲ್’ ಎಂದು ಆರಾಧಿಸಲ್ಪಡುವ ಹನುಮಂತನ 108 ಅಡಿ ಎತ್ತರದ ವಿಗ್ರಹವು ಯಮುನಾ ತೀರದಲ್ಲಿರುವ ತ್ರಿವೇಣಿ ಪುಷ್ಪ ಪ್ರದೇಶದಲ್ಲಿ 2025ರ ಮಹಾಕುಂಭಕ್ಕೂ ಮುನ್ನ ನೆಲೆಸಲಿದೆ.

 

ಈ ತ್ರಿವೇಣಿ ಪುಷ್ಪ ಪ್ರದೇಶವನ್ನು ಹರಿದ್ವಾರದ ಪರಮಾರ್ಥ ನಿಕೇತನಕ್ಕೆ 30 ವರ್ಷಗಳ ಗುತ್ತಿಗೆಗೆ ಈಗಾಗಲೇ ಹಸ್ತಾಂತರಿಸಲಾಗಿದೆ. ಈ ಗುತ್ತಿಗೆದಾರರು ಈ ಪ್ರತಿಮೆಯ ನಿರ್ಮಾಣ ಮತ್ತು ವಿಗ್ರಹ ಕಟ್ಟಡಗಳ ರಚನೆಗಳು ಮತ್ತು ಬೇಕಾಗಿರುವ ಸೌಕರ್ಯಗಳ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ತ್ರಿವೇಣಿ ಪುಷ್ಪ ದೇಶದ ವಿವಿಧ ದೇವಾಲಯಗಳ ಪ್ರತಿಕೃತಿಗಳನ್ನು, ಉತ್ತಮ ಕೆತ್ತನೆಯನ್ನು ಹೊಂದಿದ್ದರೂ, ಸರಿಯಾದ ಕಾಳಜಿಯ ಕೊರತೆಯಿಂದಾಗಿ ಕಡೆಗಣಿಸಲ್ಪಟ್ಟಿದೆ. ಆದರೆ, 2025ರ ಮಹಾಕುಂಭಕ್ಕೂ ಮುನ್ನ ಈ ಜಾಗವನ್ನು ಆಧ್ಯಾತ್ಮಿಕ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲಾಗುವುದು. ತ್ರಿವೇಣಿ ಪುಷ್ಪದಲ್ಲಿ ನವೀಕರಣ ಮಾಡಲಿದ್ದು, ಒಟ್ಟು ಹಳೆಯ ನಿರ್ಮಾಣಗಳು ಸೇರಿದಂತೆ 21 ನಿರ್ಮಾಣ ಕಾರ್ಯಗಳು ನಡೆಯಲಿವೆ. ಈ 21ರಲ್ಲಿ ವಿಗ್ರಹ, ಶಾಲೆ, ಫುಡ್ ಕೋರ್ಟ್, ನೀರಿನ ಕಾರಂಜಿ, ಧ್ಯಾನ ಕೇಂದ್ರ, ಮಣ್ಣಿನ ಮನೆ, ಆಧ್ಯಾತ್ಮಿಕ ಕುಟೀರ ಮತ್ತು ಹವನ ಕುಂಡ ಇರಲಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದು ಬಾಗಂಬರಿ ಮಠದ ಮಹಂತ್ ಬಲಬೀರ್ ಗಿರಿ ತಿಳಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶ ಸರ್ಕಾರವು ತನ್ನ ರಾಜ್ಯದಲ್ಲಿ ಅಭಿವೃದ್ಧಿಯ ದಾಖಲೆ ಬರೆಯಲು ಹೊರಟಿದೆ. ಜತೆಗೆ ಸಂಗಮ್​ ದಂಡೆಯಲ್ಲಿರುವ ಬಡೇ ಹನುಮಾನ್ ದೇವಾಲಯವು ಪುನರಾಭಿವೃದ್ಧಿ ಯೋಜನೆಗಳಲ್ಲಿ ಸೇರ್ಪಡೆ ಆಗಿರುವುದರಿಂದ, ಎಲ್ಲಾ ಸಂತರು ಮತ್ತು ಭಕ್ತರು ರಾಜ್ಯದ ಮುಖ್ಯಮಂತ್ರಿಗೆ ಕೃತಜ್ಞರಾಗಿರಬೇಕು ಎಂದು ಈ ದೇವಾಲಯದ ಪ್ರಧಾನ ಅರ್ಚಕ ಗಿರಿ ಹೇಳಿದ್ದಾರೆ.

ವಾರಣಾಸಿಯ ಕಾರಿಡಾರ್, ಅಯೋಧ್ಯೆ ದೇವಸ್ಥಾನ ಮತ್ತು ಉಜ್ಜಯಿನಿ ಮಹಾಕಾಲ್ ದೇವಸ್ಥಾನ ಕಾರಿಡಾರ್‌ನಂತೆ ಸರ್ಕಾರವು ಪ್ರಯಾಗ್‌ರಾಜ್​​ಗೆ ಕಾರಿಡಾರ್​ನ್ನು​ ಉಡುಗೊರೆಯಾಗಿ ನೀಡಿದೆ. ಪ್ರಯಾಗ್‌ರಾಜ್‌ನ ಹನುಮಾನ್ ದೇವಾಲಯ ಸಂಕೀರ್ಣಕ್ಕೂ ಹೊಸ ಸ್ವರೂಪ ನೀಡಲಾಗುವುದು ಎಂದು ಅವರು ಹೇಳಿದರು. ಇದಕ್ಕಾಗಿಯೇ ದೇವಸ್ಥಾನದ ಬಳಿ 11,589 ಚದರ್​ ಅಡಿ ಜಾಗವನ್ನು ಗುರುತಿಸಿಡಲಾಗಿದೆ.

ಜನವರಿ 22 ಕ್ಕೆ ರಾಮಂದಿರ ಉದ್ಘಾಟನೆ: ರಾಮಭಕ್ತರ ಕನಸಿನರಾಮಮಂದಿರದರಾಮನಮೂರ್ತಿ ಪ್ರಾಣ ಪ್ರತಿಷ್ಠಾಪನೆ 2024 ರ ಜನವರಿ 22ರಂದು ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ದೇವಸ್ಥಾನ ಮಂಡಳಿ ಔಪಚಾರಿಕೆ ಆಹ್ವಾನ ನೀಡಿದೆ.


Spread the love

About Laxminews 24x7

Check Also

ಟೆಸ್ಟ್ ಕ್ರಿಕೆಟ್‌ನಲ್ಲಿ ಅಬ್ಬರಿಸುವ ಸೂಚನೆ ಕೊಟ್ಟ ರಿಷಬ್ ಪಂತ್

Spread the love ಅಪಘಾತದ ಬಳಿಕ ಸುದೀರ್ಘ ವಿಶ್ರಾಂತಿ ಪಡೆದಿದ್ದ ರಿಷಬ್ ಪಂತ್ ಮತ್ತೆ ಕ್ರಿಕೆಟ್ ಗೆ ಮರಳಿದ್ದಾರೆ. ಐಪಿಎಲ್‌ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ