ಉಡುಪಿ: ತಂದೆ ಸತ್ತಾಗ ಅವರ ಮುಖವನ್ನು ಕೊನೆಯದಾಗಿ ನೋಡಲು ಸಾಧ್ಯವಾಗಿಲ್ಲ. ಈಗ ಅವರ ಅಪರ ಕರ್ಮಾಧಿಗಳನ್ನಾದರೂ ಮಾಡಲು ಬಿಡಿ ಎಂದು ಉಡುಪಿಯ ವ್ಯಕ್ತಿ ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾನೆ.
ನಾನು ಉಡುಪಿಗೆ ಬಂದದ್ದೇ ವೇಸ್ಟ್ ಆಯ್ತು. ಯಾವ ಧಾರ್ಮಿಕ ಪ್ರಕ್ರಿಯೆಗಳನ್ನು ಮಾಡಲು ಸಾಧ್ಯವಾಗಿಲ್ಲ. ನನ್ನ ಟೆಸ್ಟ್ ರಿಪೋರ್ಟ್ ಇನ್ನೂ ಬಂದಿಲ್ಲ ಎಂದು ತಂದೆಯ ತಿಥಿ ಮಾಡಲು ಮುಂಬೈನಿಂದ ಬಂದಾತ ತನ್ನ ನೋವು ತೋಡಿಕೊಂಡಿದ್ದಾನೆ.
ಉಡುಪಿಯ ಇಂದಿರಾ ನಗರ ಕ್ವಾರಂಟೈನ್ ಸೆಂಟರ್ ಗೆ ಮಹಾರಾಷ್ಟ್ರದಿಂದ ಬಂದ ವ್ಯಕ್ತಿ 13 ದಿನಗಳಿಂದ ದಿಗ್ಬಂಧನದಲ್ಲಿ ಇದ್ದಾರೆ. ತಂದೆಯ ತಿಥಿ ಮಾಡಲು ಬಂದಾತ ಅತ್ತ ಮನೆಗೂ ಹೋಗಲಾಗದೆ, ಇತ್ತ ವರದಿಯೂ ಬಾರದೆ ಬೇಸತ್ತಿದ್ದಾರೆ. ಕೊನೆಗೆ ಪೊಲೀಸರ ಮುಂದೆ ನೋವು ಹೇಳಿಕೊಂಡು ವಾಗ್ವಾದಕ್ಕಿಳಿದಿದ್ದಾರೆ.
ಕ್ವಾರಂಟೈನ್ ಸೆಂಟರ್ ನಲ್ಲಿ ಒಂದೊಂದು ಪೀಕಲಾಟ ನಡೆಯುತ್ತಿದ್ದು, ಪೊಲೀಸರಿಗೆ ಉತ್ತರಿಸಲಾಗದ, ನೋವಿಗೆ to toಸ್ಪಂದಿಸಲಾಗದ ಪರಿಸ್ಥಿತಿ ಉಂಟಾಗಿದೆ. ಉಡುಪಿ ಇಂದಿರಾನಗರದ ಹಾಸ್ಟೆಲ್ ಕ್ವಾರಂಟೈನ್ ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮನವೊಲಿಸಿ ವರದಿ ಬಾರದೆ ಮನೆಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿ ಹೋಗಿದ್ದಾರೆ.