ರಮೇಶ್ ಜಾರಕಿಹೊಳಿ-ಜಗದೀಶ್ ಶೆಟ್ಟರನ್ನು ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿ, ಜಗದೀಶ್ ಶೆಟ್ಟರ್ ನಮ್ಮ ಪ್ರೀತಿಯ ಮನುಷ್ಯ. ಅವರು ಎಲ್ಲಿದ್ದರೂ ನಮ್ಮ ಹಿರಿಯರು. ಅವರನ್ನು ನಾನು ಸತತವಾಗಿ 06 ನೇ ಸಲ ಭೇಟಿಯಾಗಿದ್ದೇನೆ. ಈ ಸಲ ಅವರ ಭೇಟಿ ವಿಚಾರ ಲೀಕ್ ಆಗಿದೆ. ನಾನು ಅವರನ್ನು ತುಂಬಾ ಸಲ ಮೀಟ್ ಆಗಿದ್ದೇನೆ. ಶೆಟ್ಟರ್ ಅವರು ಒಳ್ಳೆಯವರು. ನಮ್ಮ ಪಕ್ಷ ಬಿಡಬಾರದಾಗಿತ್ತು. ದುರ್ದೈವ ನೋಡೊಣ. ಮುಂದಿನ ದಿನಮಾನದಲ್ಲಿ ಏನಾಗುತ್ತೆಂದು. ರಾಜಕೀಯ ಚರ್ಚೆ ಏನೂ ನಡೆದಿಲ್ಲ. ವೈಯಕ್ತಿಕವಾಗಿ ಭೇಟಿಯಾಗಿದ್ದೇನೆ ಎಂದು ತಿಳಿಸಿದರು.
ಲಕ್ಷ್ಮಣ ಸವದಿ ಸ್ವಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿಗೆ ಅದ್ದೂರಿ ಸ್ವಾಗತ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಂದಗಾಂವ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಜಾರಕಿಹೊಳಿ ಬೆಂಬಲಿಗರು ರಮೇಶ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ಎರಡು ಜೆಸಿಬಿ ಮುಖಾಂತರ ಹೂಮಳೆ ಸುರಿದು ಸ್ವಾಗತ ಮಾಡಿಕೊಂಡರು. ತೆರೆದ ವಾಹನದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ ಅವರಿಗೆ ಸಾಥ್ ನೀಡಿದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ರಮೇಶ್ ಜಾರಕಿಹೊಳಿ ಅಥಣಿ ಕ್ಷೇತ್ರಕ್ಕೆ ಅಬ್ಬರದ ಎಂಟ್ರಿ ಸದ್ಯ ಎಂಬ ರಾಜಕೀಯ ಮಾತುಗಳಿಗೆ ಎಡೆಮಾಡಿಕೊಟ್ಟಿದೆ.
Laxmi News 24×7