Breaking News

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಹಿ ಪತ್ರದ ಫೈಲ್​ ಕಾಣೆಯಾಗಿದ್ದು, ಈ ಕುರಿತು ತನಿಖೆ ಆಗಬೇಕಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ

Spread the love

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 2024-25ನೇ ಸಾಲಿನ ತೆರಿಗೆ ಹೆಚ್ಚಳ ಮಾಡುವ ಕುರಿತು ಮೇಯರ್​ ಶೋಭಾ ಸೋಮನಾಚೆ ಅವರು ಮಾಡಿರುವ ಸಹಿ ಪತ್ರ ಕಾಣೆಯಾಗಿದ್ದು, ಪಾಲಿಕೆಯ ಪರಿಷತ್ ಕಾರ್ಯದರ್ಶಿ ವಿರುದ್ಧ ಪಾಲಿಕೆ ಆಯುಕ್ತ ಅಶೋಕ್​ ದುಡಗುಂಟಿ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ಪಾಲಿಕೆಯ ಕೌನ್ಸಿಲ್ ಸಭೆಯ ನಿರ್ಧಾರವನ್ನು 2023-24ರ ಬದಲು 2024-25 ಎಂದು ಮೇಯರ್ ಸಹಿ ಮಾಡಿರುವ ಪತ್ರ ಕಳ್ಳತನವಾಗಿದೆ. ಈ ವಿಚಾರ ನಿನ್ನೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಅಂತಿಮವಾಗಿ ತನಿಖೆಗೆ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಇದಾದ ಬಳಿಕ ಸಚಿವ ಸತೀಶ್​ ಜಾರಕಿಹೊಳಿ ಅವರ ನೇತೃತ್ವದಲ್ಲಿ ಫೈಲ್ ಕಳ್ಳತನ‌ ಆಗಿರುವ ಕುರಿತು ತನಿಖೆ ನಡೆಸುವಂತೆ ಪಾಲಿಕೆ ಆಯುಕ್ತರು ನಿನ್ನೆ ರಾತ್ರಿಯೇ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್​ ಜಾರಕಿಹೊಳಿ ಅವರು, ಮೇಯರ್ ಮೇಲೆ ದೂರು ಕೊಟ್ಟಿದ್ದೇವೆ. ಆದರೆ, ಪೊಲೀಸರು ಏನು ಮಾಡಿದ್ದಾರೆ ಗೊತ್ತಿಲ್ಲ. ಮುಖ್ಯ ಫೈಲ್ ಕಳ್ಳತನವಾಗಿದೆ. ಅದರಲ್ಲಿ ಮೇಯರ್ ಅವರು ಸಹಿ ಮಾಡಿದ್ದಾರೆ. ಬಿಜೆಪಿಯವರು ಕಮಿಷನರ್ ಮಾತ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಮೇಯರ್ ಸಹಿ ಮಾಡಿದ ನಂತರವೇ ಪಾಲಿಕೆ ಆಯುಕ್ತರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಹಾಗಾಗಿ, ಫೈಲ್ ಎತ್ತಿಟ್ಟಿದ್ದಾರೆ. ಮಿಸ್ಸಿಂಗ್, ಫೈಲ್ ಸಿಕ್ಕರೆ ಸತ್ಯಾಂಶ ಹೊರಗೆ ಬರುತ್ತದೆ‌ ಎಂದರು.


Spread the love

About Laxminews 24x7

Check Also

ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್​​ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ ಹೃದಯಾಘಾತದಿಂದ ನಿಧನ

Spread the loveಬೆಂಗಳೂರು/ ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್​​ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ