Breaking News

ರೈತ ದಸರಾದಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ; ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಗೀತಾ ಚೌಡಯ್ಯ

Spread the love

ಮೈಸೂರು: ನಾಡಹಬ್ಬ ದಸರಾದ ಅಂಗವಾಗಿ ರೈತ ದಸರಾ ಸಮಿತಿ ವತಿಯಿಂದ ಶನಿವಾರ ಜೆ.ಕೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಗೀತಾ ಚೌಡಯ್ಯ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಅವರ ಹಸು 46.690 ಕೆ.ಜಿ ಹಾಲು ನೀಡುವ ಮೂಲಕ 50 ಸಾವಿರ ರೂಪಾಯಿ ಮೊತ್ತದ ಚೆಕ್​ ಹಾಗೂ ಟ್ರೋಫಿಯನ್ನು ತನ್ನ ಮಾಲೀಕನಿಗೆ ದೊರಕಿಸಿಕೊಟ್ಟಿದೆ.

ಮಂಡ್ಯ ಜಿಲ್ಲೆಯ ದುದ್ದಗ್ರಾಮದ ಶೀರ ಹೆಗಡೆ ಅವರ ಹಸು 36.450 ಕೆ.ಜಿ ಹಾಲು ನೀಡಿದ್ದರಿಂದ ದ್ವಿತೀಯ ಸ್ಥಾನ ಪಡೆದು, 40 ಸಾವಿರ ರೂ. ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಮೈಸೂರಿನ ಕಾಟಪ್ಪ ಗರಡಿ ಸಮೀಪದ ನಿವಾಸಿ ಪಿ. ಸಾರವ್ ವಿನೋದ್ ರವೀಂದ್ರ ಅವರ ಹಸು 34.160 ಕೆ.ಜಿ ಹಾಲು ನೀಡಿದ್ದರಿಂದ ತೃತೀಯ ಸ್ಥಾನ ಪಡೆದು 30 ಸಾವಿರ ರೂ. ಹಾಗೂ ಟ್ರೋಫಿ ಪಡೆದುಕೊಂಡರು. ಬೆಂಗಳೂರಿನ ಆನೇಕಲ್‌ನ ಪಿ.ಶ್ರೀನಿವಾಸ್ ಅವರ ಹಸು 34.070 ಕೆ.ಜಿ. ಹಾಲು ನೀಡಿದ್ದರಿಂದ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡರು. ಇವರಿಗೆ 10 ಸಾವಿರ ರೂ. ಹಾಗೂ ಟ್ರೋಫಿ ನೀಡಲಾಯಿತು.


Spread the love

About Laxminews 24x7

Check Also

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್‌ ಕೊನೆಗೂ ರಾಜೀನಾಮೆ

Spread the loveಬೆಂಗಳೂರು, (ಸೆಪ್ಟೆಂಬರ್ 05): ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ