Home / ರಾಜಕೀಯ / ಬಾಗಲಕೋಟೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ: ಅ.19 ಅರ್ಜಿ ಸಲ್ಲಿಕೆಗೆ ಕಡೆಯ ದಿನ

ಬಾಗಲಕೋಟೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ: ಅ.19 ಅರ್ಜಿ ಸಲ್ಲಿಕೆಗೆ ಕಡೆಯ ದಿನ

Spread the love

ಬಾಗಲಕೋಟೆಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಒಟ್ಟು 23 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಕಾಲಾವಕಾಶವಿದೆ.

 ಅಧಿಸೂಚನೆಹುದ್ದೆಗಳ ವಿವರ: ಬಾದಾಮಿಯಲ್ಲಿ 3, ಬಾಗಲಕೋಟೆಯಲ್ಲಿ 2, ಬೀಳಗಿಯಲ್ಲಿ 2, ಇಲಕಲ್ಲ 2, ಗುಳೇದ ಗುಡ್ಡ 2, ಹುನಗುಂದ 4, ಜಮಖಂಡಿ 3, ಮುಧೋಳ 3, ರಬಕವಿ, ಬನಹಟ್ಟಿಯಲ್ಲಿ 4 ಹುದ್ದೆಗಳಿವೆ.

ವಿದ್ಯಾರ್ಹತೆ: ಪಿಯುಸಿ ವಿದ್ಯಾರ್ಹತೆ. ಸರ್ಟಿಫಿಕೇಷನ್​ ಕೋರ್ಸ್​ ಇನ್​​ ಲೈಬ್ರರಿ ಸೈನ್ಸ್​ ಪ್ರಮಾಣಪತ್ರ ಪಡೆದಿರಬೇಕು. ಕನಿಷ್ಠ 3 ತಿಂಗಳ ಕಂಪ್ಯೂಟರ್​ ಕೋರ್ಸ್​ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್​ ಕೋರ್ಸ್​ ಇನ್​ ಲೈಬ್ರರಿ ಸೈನ್ಸ್​ ಪದವಿ ಪಡದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಹುದ್ದೆಗೆ ಪರಿಗಣಿಸಲಾಗುತ್ತದೆ.

ವಿಶೇಷ ಸೂಚನೆ: ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಯಾಗಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯೋಮಿತಿ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾತಿ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷದವರೆಗೆ ವಯೋಮಿತಿ ಸಡಿಲಿಕೆ ಇದೆ.

ಆಯ್ಕೆ: ಮೆರಿಟ್​ ಆಧಾರದ ಮೇಲೆ ದಾಖಲಾತಿ ಪರಿಶೀಲನೆ ಬಳಿಕ ಅಭ್ಯರ್ಥಿಗಳ ಆಯ್ಕೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 300 ಮತ್ತು ಪ. ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 200 ರೂ ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕವಿದೆ. ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ಖಾತೆ ಸಂಖ್ಯೆಗೆ ಅರ್ಜಿ ಶುಲ್ಕ ಭರಿಸಬೇಕು.

ಸೆಪ್ಟೆಂಬರ್​ 26ರಿಂದ ಅರ್ಜಿ ಸಲ್ಲಿಕೆ ಮಾಡಬಹುದು. ಶುಲ್ಕ ಪಾವತಿಗೆ ಕಡೆಯ ದಿನಾಂಕ ಅಕ್ಟೋಬರ್​ 19. ಅಧಿಸೂಚನೆ ಮತ್ತು ಅಧಿಕೃತ ಅರ್ಜಿ ಸಲ್ಲಿಕೆಗೆ ಜಿಲ್ಲಾಡಳಿತದ ಅಧಿಕೃತ ಜಾಲತಾಣ bagalkot.nic.in ಇಲ್ಲಿಗೆ ಭೇಟಿ ನೀಡಿ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ