ಮೈಸೂರು : ಒಂದೂವರೆ ವರ್ಷದ ಮಗನನ್ನು ತಂದೆಯೇ ಕೆರೆಗೆ ಎಸೆದು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದಲ್ಲಿ ನಡೆದಿದೆ.
ಮಾಕೋಡು ಗ್ರಾಮದ ಗಣೇಶ್ ಎಂಬಾತನೇ ಮಗನನ್ನು ಕೊಂದಿರುವ ಪಾಪಿ ತಂದೆ. ಪ್ರಕರಣ ಸಂಬಂಧ ಪಿರಿಯಾಪಟ್ಟಣ ಪೊಲೀಸರು ಗಣೇಶ್ನನ್ನು ಬಂಧಿಸಿದ್ದಾರೆ.
2014ರಲ್ಲಿ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ಲಕ್ಷ್ಮಿ ಎಂಬುವವರನ್ನು ಗಣೇಶ್ ಮದುವೆಯಾಗಿದ್ದ. ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ದಂಪತಿ ವಾಸವಿದ್ದರು. ಈ ದಂಪತಿಗೆ ಹಾರಿಕಾ ಮತ್ತು ದೀಕ್ಷಾ ಎಂಬ ಇಬ್ಬರು ಪುತ್ರಿಯರು ಇದ್ದರು. ಬಳಿಕ ಲಕ್ಷ್ಮಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿ ಇಹಲೋಕ ತ್ಯಜಿಸಿದರು.
ನಂತರ ಗಣೇಶ್ ದೇವನಹಳ್ಳಿಯಿಂದ ತಮ್ಮ ಸ್ವಗ್ರಾಮ ಪಿರಿಯಾಪಟ್ಟಣದ ಮಾಕೋಡಿಗೆ ಬಂದು ವಾಸಿಸಲು ಆರಂಭಿಸಿದ್ದರು. ಈ ವೇಳೆ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅತ್ತೆಯ ಬಳಿಯೇ ಬಿಟ್ಟು ಬಂದಿದ್ದರು. ಆದರೆ ಒಂದೂವರೆ ವರ್ಷದ ಮಗನನ್ನು ತನ್ನ ಬಳಿ ಇಟ್ಟುಕೊಂಡಿದ್ದರು. ಈ ವೇಳೆ ಮಗ ತುಂಬಾ ಅಳುತ್ತಿದ್ದ. ಈ ಹಿನ್ನೆಲೆ ಮಗನನ್ನು ಸಾಕಲಾಗದೇ ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
Laxmi News 24×7