Breaking News

ಸತೀಶ ಜಾರಕಿಹೊಳಿ ಅವರು ಇಂದು ತಮ್ಮ ಗೆಸ್ಟ್ ಹೌಸ್ ನಲ್ಲಿರುವ  ಕ್ವಾರಂಟೈನ್  ನಿವಾಸಿಗಳ ಭೇಟಿಯಾಗಿ  ಯೋಗಕ್ಷೇಮ ವಿಚಾರಿಸಿದರು.

Spread the love

ಯಮಕನಮರಡಿ ಕ್ಷೇತ್ರ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಅವರು ಇಂದು ತಮ್ಮ ಗೆಸ್ಟ್ ಹೌಸ್ ನಲ್ಲಿರುವ  ಕ್ವಾರಂಟೈನ್  ನಿವಾಸಿಗಳ ಭೇಟಿಯಾಗಿ  ಯೋಗಕ್ಷೇಮ ವಿಚಾರಿಸಿದರು.

ಯಮಕನಮರಡಿ ಮತಕ್ಷೇತ್ರದ ದಡ್ಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಶಾಸಕರ  ಆಲ್ದಾಳ್ ಗೆಸ್ಟ್ ಹೌಸ್ ಸೇರಿದಂತೆ 10 ರಿಂದ 14 ಸ್ಥಳಗಳಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ.  ಮಹಾರಾಷ್ಟ್ರ ಹಾಗೂ ಬೇರೆ ರಾಜ್ಯ ದಿಂದ ಬಂದ ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಆಸರೆ ಒದಗಿಸಲಾಗಿದೆ.

ಕಳೆದ 9 ದಿನಗಳಿಂದ ಇಲ್ಲಿ ತಂಗಿರುವ ಕಾರ್ಮಿಕರಿಗೆ  ಸತೀಶ ಜಾರಕಿಹೊಳಿ  ಫೌಂಡೇಶನ್ ನಿಂದ ಆಹಾರ, ಹಣ್ಣು ಹಂಪಲು ಸೇರಿ ಅಗತ್ಯ ವಸ್ತುಗಳನ್ನು ಪೈರೈಸಲಾಗುತ್ತಿದೆ. ಅದರಂತೆ ಇಂದು ಶಾಸಕ ಸತೀಶ ಅವರು ಖುದ್ದಾಗಿ  ಕಾರ್ಮಿಕರ ಭೇಟಿ ನೀಡಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿ ಸಮಸ್ಯೆ ಆಲಿಸಿದ್ರು.

ಈ ಸಂದರ್ಭದಲ್ಲಿ  ಕಿರಣಸಿಂಗ್ ರಜಪೂತ, ಶಿವನಗೌಡಾ ಪಾಟೀಲ್, ಪ್ರಕಾಶ ಬಾಗೇವಾಡಿ, ರಾಜು ಧರ್ಮಶೆಟ್ಟಿ, ಅರುಣ ಕಟಾಂಬಳೆ, ರಾಮಣ್ಣ ಗುಳ್ಳಿ, ಮನಿಷಾ ರಮೇಶ ಪಾಟೀಲ್, ಪ್ರಮೋದ ರಗಶೇಟ್ಟಿ, ಸಂಜಯ ಮಾಡಲಗಿ, ಅರ್ಜುನ ಗಾವಡೆ, ಅರುಣ ಗಾವಡೆ, ಆರ್. ಕೆ. ದೇಸಾಯಿ, ಸುನೀಲ್ ಹುಕ್ಕೇರಿ, ಮಾನಿಂಗ ಶಿರಗುಪ್ಪಿ, ಸುರೇಶ ಬೆಣ್ಣಿ ಇತರರು ಇದ್ದರು.


Spread the love

About Laxminews 24x7

Check Also

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

Spread the love ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ