Breaking News

ದಾಂಡೇಲಿಗೆ ಕರೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿ ಅಂದರ್

Spread the love

ಧಾರವಾಡ: ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ಅಕ್ಟೋಬರ್ 8 ರಂದು ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ‌ ಬಳಿ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.

ಏನಿದು ಪ್ರಕರಣ?: ಯುವಕ ಹಾಗೂ ಯುವತಿ ಇಬ್ಬರೂ ಸೇರಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿದ್ದರು. ಈ‌ ವೇಳೆ, ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ‌ ತಾರಕಕ್ಕೇರಿದ್ದು, ಆರೋಪಿ ಯುವಕ ಕಟರ್​ನಿಂದ ಯುವತಿಗೆ ಇರಿದಿದ್ದನು.

ಸದ್ಯ ಆರೋಪಿ ಇಮಾಮ್ ಜಾಫರ್ ಶೇಖ್ ಬಂಧಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಹಲ್ಲೆಗೊಳಗಾಗಿದ್ದ ಯುವತಿಗೆ 20 ವರ್ಷ ವಯಸ್ಸಾಗಿತ್ತು. ಆಕೆಯ ಕುತ್ತಿಗೆ‌ ಹಾಗೂ ಕೈಗೆ ಇಮಾಮಜಾಫರ್ ಕಟರ್​ನಿಂದಿ ಇರಿದು ಗಾಯಗೊಳಿಸಿದ್ದನು. ಗಾಯಗೊಂಡ ಸ್ಥಿತಿಯಲ್ಲಿ ಯುವತಿ‌ಯನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಯುವತಿಯನ್ನ ಧಾರವಾಡ ಗ್ರಾಮೀಣ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.

ಯುವತಿ ಕೊಟ್ಟ ಮಾಹಿತಿ ಆಧಾರದ ಮೇಲೆ ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರು ನಡುವೆ ಬಹಳ ವರ್ಷಗಳಿಂದ ಪ್ರೀತಿ ಸಾಗುತ್ತಿತ್ತು. ಇತ್ತೀಚೆಗೆ ಯುವತಿ ಬೇರೆ ಯುವಕನ ಜೊತೆ ಮೊಬೈಲ್​ನಲ್ಲಿ ಮಾತನಾಡುವುದನ್ನ ಇಮಾಮಜಾಫರ್ ಗಮನಿಸಿದ್ದನು. ಹೀಗಾಗಿ‌ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಕಟರ್​ನಿಂದ ಹಲ್ಲೆ ಮಾಡಿದ್ದನು ಎಂಬುದು ದೂರಿನಲ್ಲಿ ಉಲ್ಲೇಖವಾಗಿದೆ. ಇನ್ನು ಈ ಘಟನೆ ಕುರಿತು ಶಹರ ಠಾಣೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಇತಿಹಾಸ ನಿರ್ಮಿಸಿದ ‘ನಮಾಮಿ ಗಂಗೆ’

Spread the love ಬೆಳಗಾವಿಯಲ್ಲಿ ಇತಿಹಾಸ ನಿರ್ಮಿಸಿದ ‘ನಮಾಮಿ ಗಂಗೆ’ ವೈಜಯಂತಿ ಕಾಶಿ ಉಪಸ್ಥಿತಿಯಲ್ಲಿ ಶಾಂತಲಾ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಮನಮೋಹಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ