Breaking News

ಹೊಸಬರ ‘ಆಪಲ್​ ಕಟ್’​ ಸಿನಿಮಾಗೆ ಸಿಕ್ತು ವಿಕಟಕವಿ ಯೋಗರಾಜ್​ ಭಟ್​ ಅಭಯಹಸ್ತ

Spread the love

ಆಪಲ್​ ಕಟ್’ ಟೀಸರ್​ಗೆ ನಿರ್ದೇಶಕ ಯೋಗರಾಜ್​ ಭಟ್​ ಧ್ವನಿ ನೀಡುವ ಮೂಲಕ ಹೊಸಬರ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

ಈ ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಹೊಸ ಪ್ರತಿಭೆಗಳ ಆಗಮನ ಆಗುತ್ತಲೇ ಇರುತ್ತದೆ. ಹೊಸಬರ ಸಿನಿಮಾಗಳು ತೆರೆ ಮೇಲೆ ರಾರಾಜಿಸುತ್ತಿರುತ್ತದೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜ್​ ಕಿಶೋರ್​ ಅವರ ಪುತ್ರಿ ಸಿಂಧು ಗೌಡ ನಿರ್ದೇಶಕಿಯ ಕ್ಯಾಪ್​ ತೊಟ್ಟು ಇಂಡಸ್ಟ್ರಿಗೆ ಪ್ರವೇಶಿಸಿದ್ದಾರೆ. ‘ಆಪಲ್​ ಕಟ್’​ ಎಂಬ ಕ್ಯಾಚಿ ಟೈಟಲ್​ ಜೊತೆ ವಿಭಿನ್ನ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ಶೂಟಿಂಗ್​ ಸದ್ದಿಲ್ಲದೇ ಈಗಾಗಲೇ ಮುಕ್ತಾಯಗೊಂಡಿದೆ.

ಸಿಂಧು ಗೌಡ ನಿರ್ದೇಶನದ ಈ ಚೊಚ್ಚಲ ಚಿತ್ರಕ್ಕೆ ವಿಕಟಕವಿ ಯೋಗರಾಜ್​ ಭಟ್​ ಸಾಥ್​ ಸಿಕ್ಕಿದೆ. ‘ಆಪಲ್​ ಕಟ್’ ಟೀಸರ್​ಗೆ ನಿರ್ದೇಶಕ ಯೋಗರಾಜ್​ ಭಟ್​ ಧ್ವನಿ ನೀಡುವ ಮೂಲಕ ಹೊಸಬರ ಚಿತ್ರ ತಂಡಕ್ಕೆ ಬೆಂಬಲ ನೀಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಟೀಸರ್​ ಬಿಡುಗಡೆ ಆಗಲಿದೆ. ಹೊಸ ತಂಡ, ವಿಭಿನ್ನ ಪ್ರಯತ್ನಕ್ಕೆ ಬೆಂಬಲ ನೀಡಿದ ಯೋಗರಾಜ್​ ಭಟ್ರಿಗೆ ‘ಆಪಲ್​ ಕಟ್’ ಚಿತ್ರತಂಡ ಧನ್ಯವಾದ ತಿಳಿಸಿದೆ. ಜೊತೆಗೆ ಅಕ್ಟೋಬರ್​ 8 ರಂದು ನಿರ್ದೇಶಕರ ಹುಟ್ಟುಹಬ್ಬವಿದ್ದು, ಚಿತ್ರತಂಡ ಮುಂಚಿತವಾಗಿ ಶುಭಾಶಯಗಳನ್ನು ತಿಳಿಸಿದೆ.

 ಹೊಸಬರ ‘ಆಪಲ್​ ಕಟ್’​ ಸಿನಿಮಾಗೆ ಸಿಕ್ತು ವಿಕಟಕವಿ ಯೋಗರಾಜ್​ ಭಟ್​ ಅಭಯಹಸ್ತಚಿತ್ರತಂಡ: ‘ಆಪಲ್​ ಕಟ್’ ಚಿತ್ರದಲ್ಲಿ ಯುವ ನಟ ಸೂರ್ಯ ಗೌಡ ನಾಯಕನಾಗಿ ನಟಿಸಿದ್ದಾರೆ. ಅಶ್ವಿನಿ ಪೋಲೆಪಲ್ಲಿ ಚಿತ್ರದ ನಾಯಕಿ. ಕಾಮಿಡಿ ಕಿಲಾಡಿ ಖ್ಯಾತಿಯ ಅಪ್ಪಣ್ಣ, ಅಭಿಜಿತ್, ಮೀನಾಕ್ಷಿ, ಬಾಲ ರಾಜವಾಡಿ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕಿ ಸಿಂಧು ಗೌಡ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ.

ವೀರ್ ಸಮರ್ಥ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್, ಸತ್ಯಪ್ರಕಾಶ್ ಬರೆದಿದ್ದಾರೆ. ವಾಸುಕಿ ವೈಭವ್, ವಿಜಯಶ್ರೀ ಹಾಡಿದ್ದಾರೆ. ರಾಜೇಶ್ ಗೌಡ ಛಾಯಾಗ್ರಹಣ ಹಾಗೂ ಸುಚೇಂದ್ರ ಎನ್ ಮೂರ್ತಿ ಸಂಕಲನ ‘ಆಪಲ್ ಕಟ್’ ಚಿತ್ರಕ್ಕಿದೆ. ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಶಿಲ್ಪ ಪ್ರಸನ್ನ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಸ್ಯಾಂಡಲ್​ವುಡ್​ನಲ್ಲಿ ಅನೇಕ ಹೊಸಬರ ಸಿನಿಮಾಗಳು ತೆರೆ ಕಾಣುತ್ತಿವೆ. ಇನ್ನು ಕೆಲವು ಬಿಡುಗಡೆಯಾಗಲು ಸಜ್ಜಾಗಿದೆ. ಅವುಗಳಲ್ಲಿ ‘ಆಪಲ್​ ಕಟ್’ ಕೂಡ ಒಂದು. ಸಿಂಧು ಗೌಡ ನಿರ್ದೇಶನದ ಮೊದಲ ಚಿತ್ರ ಪ್ರೇಕ್ಷಕರನ್ನು ರಂಜಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಬಹುದು ಎಂಬುದನ್ನು ಕಾದುನೋಡಬೇಕಿದೆ


Spread the love

About Laxminews 24x7

Check Also

ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ ನೀಡಿದೆ.

Spread the loveಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ