Breaking News

ಬಾಗಲಕೋಟೆ: RSS ಮುಖಂಡ ಹೃದಯಾಘಾತದಿಂದ ಕಾರಿನಲ್ಲೇ ಸಾವು

Spread the love

ಬಾಗಲಕೋಟೆ: ಆರ್​ಎಸ್​ಎಸ್​ ಮುಖಂಡರೊಬ್ಬರು ಹೃದಯಾಘಾತದಿಂದ ಕಾರಿನಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಲೋಕಾಪೂರ ಪಟ್ಟಣದ ಬಳಿ ನಡೆದಿದೆ.

ಸಿದ್ದು ಚಿಕ್ಕದಾನಿ ಮುಧೋಳ (55) ಮೃತರು. ಇವರು ಆರ್​​ಎಸ್​ಎಸ್​ನಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಸಿದ್ದು ಕಳೆದ ರಾತ್ರಿ ಬಾಗಲಕೋಟೆ ಹೋಗಿ ವಾಪಸ್​ ಬರುವಾಗ ಈ ಘಟನೆ ಸಂಭವಿಸಿದೆ.

ಮುಧೋಳ ಪಟ್ಟಣದ ನಿವಾಸಿಯಾಗಿರುವ ಇವರು, ಶಿವಾಜಿ ಸರ್ಕಲ್ ಬಳಿ ಮಂಜುನಾಥ ಮೊಬೈಲ್ ಶಾಪ್ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ನಿನ್ನೆ ರಾತ್ರಿ ಲೋಕಾಪೂರ ಪಟ್ಟಣದ ಸಮೀಪ ಇರುವ ಎಸ್‌ಆರ್ ಪೆಟ್ರೋಲ್ ಪಂಪ್​ನಲ್ಲಿ ಡೀಸೆಲ್​ ಹಾಕಿಸಿಕೊಂಡು ಹೊರಡುವ ಸಮಯದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಆದರೆ, ತೀವ್ರ ಹೃದಯಾಘಾತದಿಂದ ಅವರು ಕಾರಲ್ಲೇ ಮೃತಪಟ್ಟಿದ್ದಾರೆ.

ಮುಂಜಾನೆ ಸಮಯದಲ್ಲಿ ಪೆಟ್ರೋಲ್​ ಬಂಕ್​ನ ಕೆಲಸಗಾರರು ಬಂದು ನೋಡಿದಾಗ ಸಿದ್ದು ಅವರು ಮೃತ ಪಟ್ಟಿರುವುದು ಖಾತ್ರಿ ಆಗಿದೆ. ನಂತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಲೋಕಾಪೂರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ