Breaking News

ಜಂಬೂಸವಾರಿಗೆ ಗಜಪಡೆ ಸಿದ್ಧತೆ

Spread the love

ಮೈಸೂರು : ವಿಶ್ವವಿಖ್ಯಾತಿ ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮು ನಡೆಸಲಾಗುತ್ತಿದೆ.

ಜೊತೆಗೆ ವಿಶೇಷ ಆಹಾರ ಹಾಗೂ ಭಾರ ಹೊರುವ ತಾಲೀಮನ್ನು ನಡೆಸಲಾಗುತ್ತಿದ್ದು, ಈ ಸಿದ್ಧತೆ ಬಗ್ಗೆ ಡಿಸಿಎಫ್ ಸೌರವ್ ಕುಮಾರ್ ಅವರು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ದಸರಾ ಜಂಬೂಸವಾರಿಗೆ ಗಜಪಡೆ ತಾಲೀಮು ಸೇರಿದಂತೆ ಎಲ್ಲಾ ರೀತಿಯಲ್ಲೂ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ 5 ಆನೆಗಳಿಗೆ ಭಾರ ಹಾಕಿ ತಾಲೀಮು ನಡೆಸಿದ್ದು, ಈ ವೇಳೆ ಬರುವ ಎಲ್ಲಾ ಫೀಡ್​ಬ್ಯಾಕ್​ಗಳನ್ನು ಆಧರಿಸಿ ಬದಲಾವಣೆ ಮಾಡುತ್ತಿದ್ದೇವೆ. ಇವತ್ತು ಎರಡನೇ ತಂಡ ಆಗಮಿಸಿರುವುದರಿಂದ ನಮ್ಮ ಗಜಪಡೆ ತಂಡ ಸರಿಯಾಗಿದೆ. ತಂಡದಲ್ಲಿ 10 ಹಳೆ ಆನೆಗಳಿದ್ದು, 4 ಹೊಸ ಆನೆಗಳಿನ್ನು ಸೇರಿಸಲಾಗಿದೆ. ಹೊಸ ಆನೆಗಳಿಗೆ ಮೊದಲು ಆರಮನೆ ಆವರಣದಲ್ಲಿ 2 ರೌಂಡ್​ ತಾಲೀಮು ನಡೆಸುತ್ತೇವೆ. ಈ ಸಂದರ್ಭದಲ್ಲಿ ಆನೆಗಳ ವರ್ತನೆಯನ್ನು ನೋಡಿ ಹಳೆ ಆನೆಗಳ ಮಧ್ಯೆ ಸೇರಿಸಿ ದೈನಂದಿನ ರೌಂಡ್ಸ್​ಗೆ ಕರೆದುಕೊಂಡು ಹೋಗುತ್ತೇವೆ ಎಂದರು.

 ವಿಶ್ರಾಂತಿಯಲ್ಲಿ ದಸರಾ ಆನೆಗಳುಆನೆಗಳ ವರ್ತನೆ ಮೇಲೆ ನಮ್ಮ ಕಾವಾಡಿಗಳ ಹಿಡಿತವಿದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ. ಜಂಬೂಸವಾರಿಯಲ್ಲಿ ಭಾಗವಹಿಸುವ ಕುದುರೆಗಳ ಜೊತೆಗೂ ಸಹ ಗಜಪಡೆ ತಾಲೀಮು ನಡೆಸುತ್ತೇವೆ. ಆನೆಗಳು ರೌಂಡ್ಸ್​ ಹೋಗುವಾಗ ಸೌಂಡ್ಸ್​ ಗೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳ ಬಗ್ಗೆ ಎಚ್ಚರ ವಹಿಸಿದ್ದೇವೆ. ಪ್ರತಿ ವರ್ಷದಂತೆ ದಸರಾ ಹತ್ತಿರವಾಗುತ್ತಿದ್ದಂತೆ 14 ಆನೆಗಳ ಪೈಕಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾವುದು? ಅರಮನೆಯ ರಾಜ ವಂಶಸ್ಥರು ಆಚರಿಸುವ ಶರನ್ನವರಾತ್ರಿ ಆಚರಣೆಗೆ ಪಟ್ಟದ ಆನೆಯಾಗಿ ಯಾವುದನ್ನು ಮಹಾರಾಣಿಯವರು ಆಯ್ಕೆ ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆಯಾಗುತ್ತದೆ. ಈ ಬಗ್ಗೆ ಟೀಮ್​ ಆದ ನಂತರ ಮಾಹಿತಿ ನೀಡುತ್ತೇನೆ ಎಂದು ಡಿಸಿಎಫ್ ಸೌರವ್ ಕುಮಾರ್ ತಿಳಿಸಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ