ಚಿಕ್ಕಮಗಳೂರು: ವ್ಯಕ್ತಿಯೋರ್ವ ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮೇ 19ರಂದು ಕೊಪ್ಪ ಮೂಲದ 53 ವರ್ಷದ ವ್ಯಕ್ತಿಯ ಗಂಟಲು ಮೂಗಿನ ದ್ರವ ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ಹಾಗಾಗಿ ವ್ಯಕ್ತಿಯನ್ನು ಮೇ 20ರಂದು ಚಿಕ್ಕಮಗಳೂರಿನ ಕೆಎಸ್‍ಓಯು ಕಟ್ಟಡದಲ್ಲಿರುವ ಕೋವಿಡ್-19 ಕೇರ್ ಸೆಂಟರ್ ಗೆ ವರ್ಗಾವಣೆ ಮಾಡಲಾಗಿತ್ತು.
ಸಾಂದರ್ಭಿಕ ಚಿತ್ರ
ನೋವು ಮತ್ತು ರಕ್ತಸ್ರಾವದ ಮೂಲವ್ಯಾಧಿ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಐಸೋಲೇಶನ್ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಇಂದು ಬೆಳಗ್ಗೆ ವ್ಯಕ್ತಿಯ ಮೃತದೇಹ ಆಸ್ಪತ್ರೆಯ ಶೌಚಾಲಯದ ಒಳಗಡೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ರೆ ವ್ಯಕ್ತಿಯ ಕೋವಿಡ್-19 ವರದಿ ನೆಗೆಟಿವ್ ಬಂದಿದೆ.
Laxmi News 24×7