Breaking News

ಹಾವೇರಿ: ಒನ್​ಟೈಮ್​ ಸೆಟಲ್​ಮೆಂಟ್​ಗೆ ಸ್ಪಂದಿಸದ ಆರೋಪ.. ಬ್ಯಾಂಕ್​ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೈತ

Spread the love

ಹಾವೇರಿ: ಒಟಿಎಸ್ ಸೌಲಭ್ಯದಿಂದ ವಂಚಿತ ರೈತನೊಬ್ಬ ಬ್ಯಾಂಕನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಮಾಕನೂರು ಗ್ರಾಮದಲ್ಲಿ ನಡೆದಿದೆ.

ಬ್ಯಾಂಕ್​ನಲ್ಲಿ ಬೆಳೆಸಾಲ ಮಾಡಿದ್ದ ಸಂಜೀವ ಕುರುಬರ ಅನ್ನೋ ರೈತ ಸಂಜೀವ್​ ಆತ್ಮಹತ್ಯೆಗೆ ಮುಂದಾಗಿದ್ದ. ಸಂಜೀವ್ ಬ್ಯಾಂಕನಲ್ಲಿ 3 ಲಕ್ಷದ 45 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದಾನೆ.

ಈ ಸಾಲಕ್ಕೆ ವರ್ಷದಿಂದ ವರ್ಷಕ್ಕೆ ಬಡ್ಡಿ ಹೆಚ್ಚಾಗಿ ಸುಮಾರು 10 ಲಕ್ಷ ರೂಪಾಯಿ ಆಗಿ ಬೆಳೆದಿದೆ. ಒನ್ ಟೈಮ್ ಸೆಟಲಮೆಂಟ್ (ಒಟಿಎಸ್) ಮಾಡುವಂತೆ ರೈತ ಮನವಿ ಮಾಡಿದ್ದರು ಬ್ಯಾಂಕ್ ಸಿಬ್ಬಂದಿ ಸ್ಪಂದಿಸಿಲ್ಲ. ಬ್ಯಾಂಕ್​ ನವರು ಒಟಿಎಸ್ ಮಾಡದೆ ಚಾಲ್ತಿ ಮಾಡಿ ಸಾಲ ಹೆಚ್ಚಾಗಿದೆ ಎಂದು ರೈತ ಆರೋಪಿಸಿದ್ದಾನೆ.

ಸಂಜೀವ್ ಬ್ಯಾಂಕ್ ಸಿಬ್ಬಂದಿಯ ಮುಂದೆಯೇ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಬ್ಯಾಂಕನಲ್ಲಿದ್ದ ಇತರೆ ರೈತರು ಸಂಜೀವನನ್ನು ರಕ್ಷಣೆ ಮಾಡಿದ್ದಾರೆ‌. ರೈತ ಆತ್ಮಹತ್ಯೆಗೆ ಮುಂದಾಗುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ಆತಂಕಗೊಂಡಿದ್ದಾರೆ. ಬ್ಯಾಂಕ್ ರೈತರಿಗೆ ಒಟಿಎಸ್ ಸೌಲಭ್ಯ ಜಾರಿಗೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೆಲ ದಿನಗಳ ಇಂತಹದ್ದೇ ಪ್ರಕರಣದಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ರಾಣೆಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಮೂರು ಎಕರೆ ಹತ್ತು ಗುಂಟೆ ಜಮೀನು ಹೊಂದಿದ್ದ ರೈತ ವಿವಿಧ ಬ್ಯಾಂಕ್​ಗಳಲ್ಲಿ ಮತ್ತು ಕೈಸಾಲ ಸೇರಿ ಆರು ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಆದರೆ, ಒನ್ ಟೈಂ ಸೆಟ್ಲಮೆಂಟ್ ಯೋಜನೆಯ ಲಾಭ ಸಿಗದಂತೆ ಬ್ಯಾಂಕ್ ಸಿಬ್ಬಂದಿ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಇದರಿಂದ ಯುವ ರೈತ ದರ್ಶನ ಮುದ್ದಪ್ಪನವರ್ ಸಾವನ್ನಪ್ಪಿದ್ದ. ಬ್ಯಾಂಕ್​ ಮುಂದೆ ರೈತನ ಶವವಿಟ್ಟು ಕಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.


Spread the love

About Laxminews 24x7

Check Also

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಏಳು ಆರೋಪಿಗಳ ಪೈಕಿ ಇಬ್ಬರಿಗೆ ಶ್ಯೂರಿಟಿ ಸಿಕ್ಕಿಲ್ಲ.

Spread the loveಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿ ಜಾಮೀನು ಪಡೆದಿದ್ದ ಏಳು ಮಂದಿ ಆರೋಪಿಗಳ ಪೈಕಿ ಇಬ್ಬರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ