Breaking News

ಬಹುನಿರೀಕ್ಷಿತ ಯುಐ ಟೀಸರ್ ನಾಳೆ ಬೆಳಗ್ಗೆ 10 ಗಂಟೆಗೆ​ ಅನಾವರಣ

Spread the love

ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಯುಐ’. ಶೀರ್ಷಿಕೆಯಿಂದಲೇ ದಕ್ಷಿಣ ಚಿತ್ರರಂಗದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಕಥೆ ಕುರಿತು ಕಿಂಚಿತ್ತೂ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಉಪ್ಪಿ ನಟನೆಯ ಅಥವಾ ನಿರ್ದೇಶನದ ಪ್ರತೀ ಸಿನಿಮಾ ಕೂಡ ವಿಭಿನ್ನ. ಹಾಗಾಗಿ ಉಪ್ಪಿ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.

ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಯುಐ ಚಿತ್ರದಲ್ಲಿ ನಟ ಉಪೇಂದ್ರ ನಟಿಸುವುದರ ಜೊತೆಗೆ ಆಯಕ್ಷನ್​ ಕಟ್​ ಕೂಡ ಹೇಳಿದ್ದಾರೆ. ಉಪ್ಪಿ 2 ಸಿನಿಮಾ ಬಳಿಕ ಉಪೇಂದ್ರ ಡೈರೆಕ್ಟರ್​ ಕ್ಯಾಪ್​ ತೊಟ್ಟ ಚಿತ್ರವಿದು. ಉಪ್ಪಿ 2 ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಉಪೇಂದ್ರ ಅವರ ನಟನೆಗೆ ಮಾತ್ರವಲ್ಲ, ನಿರ್ದೇಶನ ಶೈಲಿಗೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರು ನಟಿಸುವುದರ ಜೊತೆ ನಿರ್ದೇಶನ ಮಾಡಿರುವ ಯುಐ ಚಿತ್ರದ ಟೀಸರ್​ ನಾಳೆ ಬೆಳಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ. ಹೀಗಾಗಿ ಅಭಿಮಾನಿಗಳಲ್ಲಿ ಸಿನಿಮಾ ಕುರಿತ ಕುತೂಹಲ ಹೆಚ್ಚಾಗಿದೆ.

ಅದ್ಧೂರಿಯಾಗಿ ಸೆಟ್ಟೇರಿದ್ದ ಯುಐ ಚಿತ್ರ ಈಗಾಗಲೇ ಶೂಟಿಂಗ್​ ಪೂರ್ಣಗೊಳಿಸಿ ಪೋಸ್ಟ್​​ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಕೆಪಿ ಶ್ರೀಕಾಂತ್​ ಮತ್ತು ನವೀನ್​ ಬಂಡವಾಳ ಹೂಡಿರುವ ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗಾಗಲೇ ವಿಭಿನ್ನ ರೀತಿಯಲ್ಲಿ ಪ್ರಮೋಶನ್​ ಪ್ರಾರಂಭಿಸಿದೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ