Breaking News

ಶೇ.50ರಷ್ಟು ರಿಯಾಯಿತಿ ಪಾವತಿಗೆ ಗಡುವು ಮುಕ್ತಾಯ: ವಾಹನ ಸವಾರರಿಂದ ₹9 ಕೋಟಿಗೂ ಹೆಚ್ಚು ದಂಡ​ ಸಂಗ್ರಹ​!

Spread the love

ಬೆಂಗಳೂರು: ಸಂಚಾರ ನಿಯಮ‌ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಶೇ. 50ರಷ್ಟು ರಿಯಾಯಿತಿ ದಂಡ ಪಾವತಿ ನಿನ್ನೆಗೆ (ಶನಿವಾರ) ಕೊನೆಯಾಗಿದ್ದು, ಒಂದೇ ದಿನದಲ್ಲಿ ಸವಾರರು ಒಂದು ಕೋಟಿ ರೂ.ಗೂ ಹೆಚ್ಚು ದಂಡ ಕಟ್ಟಿದ್ದಾರೆ.

ರಿಯಾಯಿತಿ ದಂಡ ಜಾರಿಯಾದಾಗಿನಿಂದ ಹಿಡಿದು ನಿನ್ನೆಯವರೆಗೆ 9 ಕೋಟಿ ರೂಪಾಯಿಗೂ ಹೆಚ್ಚು ದಂಡ ಸಂಗ್ರಹವಾಗಿದೆ.

ಶುಕ್ರವಾರದವರೆಗೆ 8 ಕೋಟಿ ರೂ.ವರೆಗೆ ದಂಡ ಸಂಗ್ರಹ ಆಗಿತ್ತು‌. ರಿಯಾಯಿತಿ ದಂಡ ಪಾವತಿಸಲು ನಿನ್ನೆಯೇ ಕೊನೆ ದಿನ. ಫೆಬ್ರವರಿ 11ಕ್ಕೂ ಮುನ್ನದ ಸಂಚಾರ ನಿಯಮ‌ ಉಲ್ಲಂಘನೆ ಪ್ರಕರಣಗಳಿಗೆ ಶೇ. 50 ರಷ್ಟು ದಂಡ ಕಟ್ಟುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದರು. ರಿಯಾಯಿತಿ ದಂಡ ಪಾವತಿಗೆ ಗಡುವು ಮುಕ್ತಾಯವಾಗುವ 24 ಗಂಟೆ ಅಂತರದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ದಂಡದ ಮೊತ್ತ ಪಾವತಿಸಿದ್ದಾರೆ. ಈ ಮೂಲಕ ಜುಲೈ 6 ರಿಂದ ಸೆ‌.9ರವರೆಗೆ ಈವರೆಗೆ ಒಟ್ಟು 2,92,792 ಲಕ್ಷ ಪ್ರಕರಣಗಳಿಂದ 9.24 ಕೋಟಿ ರೂ.ಗೂ ಹೆಚ್ಚು ದಂಡ ಪಾವತಿಯಾಗಿದೆ.

ಜುಲೈ ತಿಂಗಳಲ್ಲಿ 1,23,178 ಲಕ್ಷ ಕೇಸ್​ಗಳಿಂದ 3,89 ಕೋಟಿ ರೂ. ಸಂಗ್ರಹವಾಗಿದೆ. ಆಗಸ್ಟ್​ನಲ್ಲಿ 86,587 ಪ್ರಕರಣಗಳಿಂದ 2.82 ಕೋಟಿ ರೂ. ಕಲೆಕ್ಷನ್ ಆಗಿದೆ.​ ಸೆಪ್ಟೆಂಬರ್ 9ಕ್ಕೆ ಕೊನೆಗೊಂಡಂತೆ 83 ಸಾವಿರ ಕೇಸ್​​ಗಳಿಂದ 2.82 ಕೋಟಿ ರೂಪಾಯಿ ಸೇರಿದಂತೆ ಒಟ್ಟು 9 ಕೋಟಿ ರೂ.ಗೂ ಹೆಚ್ಚು ದಂಡ ಪಾವತಿಸಿಕೊಳ್ಳಲಾಗಿದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಿಂಗಳು ಪ್ರಕರಣಗಳು ಒಟ್ಟು ದಂಡ
ಜುಲೈ 1,23,178 3,89 ಕೋಟಿ ರೂ.
ಆಗಸ್ಟ್ 86,587 2.82 ಕೋಟಿ ರೂ.
ಸೆಪ್ಟೆಂಬರ್ 83,000 2.82 ಕೋಟಿ ರೂ.

 

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೇರೆಗೆ ಸರ್ಕಾರ ಟ್ರಾಫಿಕ್​ ರೂಲ್ಸ್​ ಉಲ್ಲಂಘಿಸಿದವರಿಗೆ ಶೇ. 50 ರಷ್ಟು ದಂಡ ಪಾವತಿಗೆ ಆದೇಶ ಹೊರಡಿಸಿತ್ತು. ಈ ಅವಕಾಶವನ್ನು ವಾಹನ ಸವಾರರು ಉಪಯೋಗಿಸಿಕೊಳ್ಳುವಂತೆ ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದರು. ಜಲೈ 11 ರಿಂದ ಹಿಡಿದು ಸೆ. 9ರ ವರೆಗೆ ಈ ಅವಕಾಶ ಇತ್ತು. ಇದಕ್ಕೂ ಮುನ್ನ ಇದೇ ರೀತಿ ಎರಡು ಬಾರಿ ಅವಕಾಶ ನೀಡಲಾಗಿತ್ತು. ಆಗ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿತ್ತು. ಮೂರನೇ ಅವಕಾಶ ನಿನ್ನೆಗೆ ಪೂರ್ಣಗೊಂಡಿದೆ. ಸರಿಸುಮಾರು 9 ಕೋಟಿ ರೂ. ದಂಡ ಸರ್ಕಾರದ ಬೊಕ್ಕಸ ತಲುಪಿದೆ.


Spread the love

About Laxminews 24x7

Check Also

ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಆದೇಶ ನೀಡಿದೆ.

Spread the loveಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ