Breaking News

ಸಿಂಥೆಟಿಕ್ ರಿದಮ್ ಇಂಡಿಯನ್ ಮೃದಂಗ ಮತ್ತು ತಬಲಾವನ್ನು ಸಿಂಥೆಟಿಕ್ ಡ್ರಮ್ ಹೆಡ್‌ಗಳನ್ನು ಬಳಸಿ ತಯಾರಿಸಲಾಗುತ್ತಿದೆ

Spread the love

ಬೆಂಗಳೂರು: ನಮ್ಮ ದೈನಂದಿನ ಜೀವನದಲ್ಲಿ ಸಂಗೀತ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಅನಾದಿ ಕಾಲದಿಂದಲೂ ರಾಗ, ತಾಳ, ಲಯ ಬದ್ಧ ನಾದವು ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲಿ, ಸಂಗೀತ ಪ್ರಾಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತ ಬಂದಿದೆ.

ಅಲ್ಲದೇ ಹಲವು ಕಾಯಿಲೆಗಳು ಶೀಘ್ರವಾಗಿ ಗುಣವಾಗಲು ಇದು ಸಹಕಾರಿಯಾಗಿದೆ ಎನ್ನುವುದು ಹಲವು ಸಂಶೋಧನೆಗಳಿಂದ ದೃಢಪಟ್ಟಿದೆ.

ಸಂಗೀತವು ಪ್ರೀತಿ ಮತ್ತು ಸಂತೋಷದ ಸಾರ್ವತ್ರಿಕ ಭಾಷೆಯಾಗಿದ್ದು, ಇದಕ್ಕೆ ಅಪವಾದ ಎಂಬಂತೆ ವಾದ್ಯಗಳಿಗೆ ಪ್ರಾಣಿ ಚರ್ಮವನ್ನು ಬಳಸುತ್ತಿದ್ದಾರೆ. ಆದರೆ, ಸಿಲಿಕಾನ್​ಸಿಟಿಯ ಕಾರುಣ್ಯ ಮ್ಯೂಸಿಕಲ್ ಸಂಸ್ಥೆಯಿಂದ ವಿಶ್ವದಲ್ಲೇ ಮೊದಲ ಬಾರಿಗೆ ತಯಾರಾಗುತ್ತಿರುವ ವಾದ್ಯಗಳು ಕ್ರೌರ್ಯ ದಿಂದ ತಯಾರಾಗಿಲ್ಲ ಎನ್ನುವುದು ವಿಶೇಷವಾಗಿದೆ.

ಪಿಟೀಲಿಗೆ ಬಳಸುವ ಕುದುರೆ ಕೂದಲಿನಿಂದ ಹಿಡಿದು ತಾಳವಾದ್ಯಗಳಲ್ಲಿ ಚರ್ಮದವರೆಗೆ, ಸಾಂಪ್ರದಾಯಿಕ ಭಾರತೀಯ ಮತ್ತು ಪಾಶ್ಚಿಮಾತ್ಯ ವಾದ್ಯಗಳಲ್ಲಿ ಅನೇಕ ಪ್ರಾಣಿ ಉತ್ಪನ್ನಗಳನ್ನು ಬಳಸುತ್ತಾರೆ. ಈ ರೀತಿಯ ಪ್ರಾಣಿಗಳಿಗೆ ಚರ್ಮವನ್ನು ಬಳಸುವುದು ತಪ್ಪಿಸಲು ಹಾಗೂ ಪ್ರಾಣಿಗಳ ರಕ್ಷಣೆ ಮಾಡಲು ಸಿಂಥೆಟಿಕ್ ರಬ್ಬರ್‌ ಅಂಟನ್ನು ಬಳಸಿ ವಾದ್ಯಗಳನ್ನು ಕಾರುಣ್ಯ ಮ್ಯೂಸಿಕಲ್ ಸಂಸ್ಥೆಯ ಸಂಸ್ಥಾಪಕ ಡಾ. ಕೆ. ವರದರಂಗನ್ತ ತಯಾರಿಸುತ್ತಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ