Breaking News

ಫಲಿತಾಂಶ ಸುಧಾರಣೆಯತ್ತ ಶಿಕ್ಷಕರ ದಿಟ್ಟ ಹೆಜ್ಜೆ: ವಿಶೇಷ ತರಗತಿ ಮೂಲಕ ವಿದ್ಯಾರ್ಥಿಗಳ ತಯಾರಿ

Spread the love

ಬೆಳಗಾವಿ: ಇಂದು ಸ್ಪರ್ಧಾತ್ಮಕ ಯುಗ. ಎಲ್ಲ ಹೆತ್ತವರದ್ದು ತಮ್ಮ ಮಕ್ಕಳನ್ನು ಸಾಧನೆ ಮಾಡಬೇಕು ಎಂಬ ಹಂಬಲ.

ಆದರೆ, ಆರ್ಥಿಕವಾಗಿ ಸದೃಢವಾಗಿರುವವರು ತಮ್ಮ ಮಕ್ಕಳನ್ನು ಕೋಚಿಂಗ್ ಸೆಂಟರ್, ಟ್ಯೂಶನ್​ಗೆ ಕಳುಹಿಸುತ್ತಾರೆ. ಇದು ಸಾಧ್ಯವಾಗದೇ ಬಡವರು ಪರದಾಡುತ್ತಾರೆ. ಅಂತಹವರ ಮಕ್ಕಳಿಗೂ‌ ಅನುಕೂಲವಾಗಲಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅವರೂ ಸಾಧನೆ‌ ಮೆರೆಯಲಿ ಎನ್ನುವ ಕಾಳಜಿಯಿಂದ ಬೆಳಗಾವಿಯ ಸರ್ಕಾರಿ‌ ಸರ್ದಾರ್ಸ್ ಪ್ರೌಢ ಶಾಲೆಯಲ್ಲಿ ನಿತ್ಯ ಬೆಳಗ್ಗೆ ವಿಶೇಷ ತರಗತಿ ಸಂಘಟಿಸಿ, ಮಕ್ಕಳಲ್ಲಿ ಪ್ರೇರಣೆ ತುಂಬಲಾಗುತ್ತಿದೆ. ಇನ್ನು ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಶಿಕ್ಷಕರ ಪಾಠ ಕೇಳುತ್ತಿದ್ದಾರೆ.

ಇದು ಈ‌ ಒಂದೇ ಶಾಲೆಯ‌ ಕತೆಯಲ್ಲ. ಜಿಲ್ಲೆಯ ಬಹುತೇಕ‌ ಸರ್ಕಾರಿ ಶಾಲೆಗಳಲ್ಲಿ‌ ಕಂಡುಬರುತ್ತಿರುವ ಚಿತ್ರಣವಿದು. ಹೌದು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ‌ ಸರ್ಕಾರಿ‌ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲಾಗುತ್ತಿದೆ. ಸರ್ಕಾರಿ ಸರ್ದಾರ್ಸ್ ಪ್ರೌಢ ಶಾಲೆಯಲ್ಲಿ ಆಗಸ್ಟ್ 1 ರಿಂದ ಪ್ರತಿದಿನ ಬೆಳಗ್ಗೆ 9 ರಿಂದ 10 ರವರೆಗೆ ಒಂದೊಂದು ವಿಷಯ ಕುರಿತು‌ ವಿಶೇಷ ತರಗತಿ ನಡೆಸಲಾಗುತ್ತಿದೆ. ಶಾಲೆಯ ಆವರಣದಲ್ಲಿ ಗಿಡಮರಗಳ ಕೆಳಗೆ ಕುಳಿತುಕೊಂಡು ಶಿಕ್ಷಕರು ಮಾಡುವ ಪಾಠವನ್ನು ಮಕ್ಕಳು ಶ್ರದ್ಧೆಯಿಂದ ಆಲಿಸುತ್ತಿದ್ದಾರೆ.

ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿ ಅನನ್ಯ ಕೊಡ್ಲಿ, ವಿಶೇಷ ತರಗತಿಗಳಿಂದ ನಮಗೆ ತುಂಬಾ ಪ್ರಯೋಜನ‌ ಆಗುತ್ತಿದೆ. ತರಗತಿ ಅವಧಿಗಿಂತ ಭಿನ್ನವಾದ ಕಲಿಕೆ ಇದು. ಹಲವು ಚಟುವಟಿಕೆಗಳನ್ನು ಈ ಒಂದು ಗಂಟೆಯಲ್ಲಿ ಕೈಗೊಳ್ಳಬಹುದಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸಿ, ರಾಜ್ಯಕ್ಕೆ ಟಾಪರ್ ಆಗಬೇಕು ಎಂಬ ಗುರಿ ಇಟ್ಟುಕೊಂಡು ಅಧ್ಯಯನ ಮಾಡುತ್ತಿದ್ದೇನೆ ಎಂದರು‌.

ಇನ್ನೊಬ್ಬ ವಿದ್ಯಾರ್ಥಿನಿ ರಾಧಿಕಾ ಚೌಗುಲೆ ಮಾತನಾಡಿ, ನಿತ್ಯ ಒಂದೊಂದು ವಿಷಯವನ್ನು ಶಿಕ್ಷಕರು ನಮಗೆ ಕಲಿಸುತ್ತಿದ್ದಾರೆ. ಶಿಕ್ಷಕರ ಪ್ರೋತ್ಸಾಹದಿಂದಾಗಿ ನಾನು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಪಾಸಾಗಿದ್ದು, ಪ್ರತಿ ತಿಂಗಳು ಒಂದು ಸಾವಿರ ರೂ. ವಿದ್ಯಾರ್ಥಿ ವೇತನ ಬರುತ್ತಿದೆ. ಈ ಹಣವನ್ನು ನನ್ನ ಭವಿಷ್ಯದ ಶಿಕ್ಷಣಕ್ಕೆ ಬಳಸಿಕೊಳ್ಳುತ್ತೇನೆ. ಮುಂದೆ ವೈದ್ಯೆಯಾಗಿ ಗ್ರಾಮೀಣ ಜನರಿಗೆ ಉತ್ತಮ‌ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಿದ್ದೇನೆ ಎಂದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ