ಬೆಳಗಾವಿ- ಬೆಳಗಾವಿ ಕೆಎಲ್‌ಇ ಶ್ರೀ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶಾರೀರ ರಚನಾಶಾಸ್ತç ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಮಹಾಂತೇಶ ರಾಮಣ್ಣವರ ಅವರ ಆಯುರ್ವೆದ ವೈದ್ಯಕೀಯ ಬೋಧನಾ ಸೇವೆಯನ್ನು ಪರಿಗಣಿಸಿ
ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಬೆಳಗಾವಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮತ್ತು ರಿಸರ್ಚ (ಸ್ವಾಯತ್ತ ವಿಶ್ವವಿದ್ಯಾಲಯ) ವತಿಯಿಂದ ಸೆ.೫ ರಂದು ಬೆಳಗಾವಿ ಕೆಎಲ್‌ಇ ಜೆಎನ್‌ಎಂಸಿಯ ಡಾ.ಎಚ್.ಬಿ.ರಾಜಶೇಖರ ಸಭಾಗೃಹದಲ್ಲಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಎಸ್.ವಿದ್ಯಾಶಂಕರ ಆಗಮಿಸಿದ್ದರು. ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮತ್ತು ರಿಸರ್ಚ (ಸ್ವಾಯತ್ತ ವಿಶ್ವವಿದ್ಯಾಲಯ) ಉಪಕುಲಪತಿಗಳಾದ ಡಾ.ನೀತಿನ್ ಗಂಗನೆ, ಕುಲಸಚಿವರಾದ ಡಾ.ಎಂ.ಎಸ್.ಗಣಾಚಾರಿ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಜ್ಯೋತಿ ನಾಗಮೋತಿ ಉಪಸ್ಥಿತರಿದ್ದರು.
ಡಾ. ಮಹಾಂತೇಶ ರಾಮಣ್ಣವರ ಅವರಿಗೆ ಪ್ರಶಸ್ತಿ ಲಭಿಸಿರುವದಕ್ಕೆ ಕಾಲೇಜಿನ ಪ್ರಾಚಾರ್ಯರಾದ ಡಾ.ಸುಹಾಸಕುಮಾರ ಶೆಟ್ಟಿ, ಶಿಕ್ಷಕರು, ವೈದ್ಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ