ಬುಲವಾಯೊ: ಜಿಂಬಾಬ್ವೆ ಕ್ರಿಕೆಟ್ ಪರ ಟೆಸ್ಟ್ನಲ್ಲಿ ಶತಕ ವಿಕೆಟ್ ಗಳಿಸಿದ ದಿಗ್ಗಜ ಆಲ್ರೌಂಡರ್ ಆಟಗಾರ ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು 49ನೇ ವಯಸ್ಸಿಗೆ ಇಹಲೋಕವನ್ನು ತ್ಯಜಿಸಿದ್ದಾರೆ. ಹೀತ್ ಸ್ಟ್ರೀಕ್ ಮರಣದ ಸುದ್ದಿಯಲ್ಲಿ ಅವರ ಪತ್ನಿ ನಾಡಿನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ. ಜಿಂಬಾಬ್ವೆಯ ಮಾಜಿ ನಾಯಕನ ಅಗಲಿಕೆಗೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ.
ಹೀತ್ ಸ್ಟ್ರೀಕ್ ಪತ್ನಿ ನಾಡಿನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ “ಸೆಪ್ಟೆಂಬರ್ 3, 2023ರ ಭಾನುವಾರದ ಮುಂಜಾನೆ, ನನ್ನ ಜೀವನದ ಪ್ರೀತಿ ಮತ್ತು ನನ್ನ ಮಕ್ಕಳ ತಂದೆಯನ್ನು ದೇವತೆಗಳು ಕರೆದೊಯ್ದರು. ತನ್ನ ಕೊನೆಯ ದಿನಗಳನ್ನು ಕುಟುಂಬ ಮತ್ತು ಹತ್ತಿರದ ಪ್ರೀತಿಪಾತ್ರದವರೊಂದಿಗೆ ಅವರು ಕಳೆದಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಹೀತ್ ಸ್ಟ್ರೀಕ್ ನಿಧನದ ಬಗ್ಗೆ ಅವರ ಪತ್ನಿ ಫೇಸ್ಬುಕ್ನಲ್ಲಿ ಮಾಡಿರುವ ಪೋಸ್ಟ್ಸ್ಟ್ರೀಕ್ ಅವರು ಕೊಲೊನ್ ಮತ್ತು ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಜೋಹಾನ್ಸ್ ಬರ್ಗ್ ಆಸ್ಪತ್ರೆಯಲ್ಲಿ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಹೆನ್ರಿ ಒಲೊಂಗಾ ಅವರು ಮಾಡಿದ್ದ ಎಕ್ಸ್ ಖಾತೆಯಲ್ಲಿ ಹೀತ್ ಸ್ಟ್ರೀಕ್ ಮರಣ ಹೊಂದಿದ್ದಾರೆ ಎಂದು ಪೋಸ್ಟ್ ಮಾಡಿ ನಂತರ ಅದು ಸುಳ್ಳು ಸುದ್ದಿ ಎಂದು ಅವರೇ ಸ್ಪಷ್ಟನೆಯನ್ನೂ ಕೊಟ್ಟಿದ್ದರು. ಅಂದು ಅವರ ನಿಧನದ ಸುದ್ದಿಗಳು ಹರಿದಾಡಿದ್ದವು.