ಹುಕ್ಕೇರಿ : ವಿಶ್ವಕರ್ಮ ಮತ್ತು ಅಮರ ಶಿಲ್ಪಿ ಜಕನಾಚಾರಿ ಜಯಂತಿಯನ್ನು ಹುಕ್ಕೇರಿ ತಾಲೂಕಾ ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಹುಕ್ಕೇರಿ ನಗರದ ವಿಶ್ವಕರ್ಮ ಸಮಾಜದ ಮುಖಂಡರಾದ ರವೀಂದ್ರ ಬಡಿಗೇರ ಮತ್ತು ಕೆ ಬಿ ಬಡಿಗೇರ ಹಾಗೂ ಮೌನೇಶ ಪೊದ್ದಾರ ರವರು ಅಸಮಾಧಾನ ವ್ಯಕ್ತಪಡಿಸಿದರು
ಹುಕ್ಕೇರಿ ನಗರದ ತಾಲೂಕಾ ಆಡಳಿತ ಸೌಧದಲ್ಲಿ ಜರುಗಿದ ವಿಶ್ವಕರ್ಮ ಮತ್ತು ಶ್ರೀ ಕೃಷ್ಣ ಜನ್ಮ ದಿನಾಚಾರಣೆ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಬಡಿಗೇರ ಸಮಾಜ ಮತ್ತು ಯಾದವ ಸಮಾಜದ ಮುಖಂಡರು ಸಲಹೆ ಸೂಚನೆ ನೀಡಿದರು.
ವೇದಿಕೆ ಮೇಲೆ ಗ್ರೇಡ 2 ತಹಸಿಲ್ದಾರ ಪ್ರಕಾಶ ಕಲ್ಲೋಳಿ ಮಾತನಾಡಿ ಪ್ರತಿ ವರ್ಷದಂತೆ ಶ್ರೀ ಕೃಷ್ಣ ಜನ್ಮ ದಿನಾಚಾರಣೆ ಮತ್ತು ವಿಶ್ವಕರ್ಮ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವದು ಎಂದರು