Breaking News

ಇಂಡೋನೇಷ್ಯಾದ ಬಾಲಿ, ಜಾವಾ ದ್ವೀಪಗಳಲ್ಲಿ ಪ್ರಬಲ ಭೂಕಂಪ: ಯಾವುದೇ ಸಾವು- ನೋವುಗಳು ವರದಿಯಾಗಿಲ್ಲ

Spread the love

ಡೆನ್‌ಪಾಸರ್ (ಇಂಡೋನೇಷ್ಯಾ): ಇಂಡೋನೇಷ್ಯಾದ ರೆಸಾರ್ಟ್ ದ್ವೀಪವಾದ ಬಾಲಿ ಮತ್ತು ದೇಶದ ಇತರ ಭಾಗಗಳಲ್ಲಿ ಮಂಗಳವಾರ ಪ್ರಬಲ ಭೂಕಂಪ ಸಂಭವಿಸಿದೆ.

ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿದ್ದಾರೆ. ಆದರೆ, ಸದ್ಯ ಯಾವುದೇ ಸಾವುನೋವಿನ ಕುರಿತು ವರದಿಯಾಗಿಲ್ಲ. 513.5 ಕಿಲೋಮೀಟರ್ ಆಳದಲ್ಲಿ 7.1 ತೀವ್ರತೆಯ ಭೂಕಂಪ ಸಂಭಸಿದೆ. ಬಾಲಿಯ ಪಕ್ಕದಲ್ಲಿರುವ ಲೊಂಬಾಕ್ ದ್ವೀಪದ ಕರಾವಳಿಯ ಸಮೀಪವಿರುವ ಸಣ್ಣ ದ್ವೀಪವಾದ ಗಿಲಿ ಏರ್‌ನಿಂದ ಈಶಾನ್ಯಕ್ಕೆ 181 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಪಾಯಿಂಟ್​ ಇದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಇಂಡೋನೇಷ್ಯಾದ ಹವಾಮಾನ ಮತ್ತು ಭೂಭೌತಿಕ ಸಂಸ್ಥೆ: ಇಂಡೋನೇಷ್ಯಾದ ಹವಾಮಾನ ಮತ್ತು ಭೂಭೌತಿಕ ಸಂಸ್ಥೆಯು ಸುನಾಮಿಯ ಅಪಾಯವಿಲ್ಲ ಎಂದು ಹೇಳಿದೆ. ಆದರೆ, ಸಂಭವನೀಯ ಆಘಾತಗಳ ಬಗ್ಗೆ ಎಚ್ಚರಿಕೆ ನೀಡಿದೆ. ಸಂಸ್ಥೆಯ ಪ್ರಾಥಮಿಕ ಪ್ರಮಾಣವು 7.4 ರಷ್ಟು ಆಗಿದೆ. ಆರಂಭಿಕ ಅಳತೆಗಳಲ್ಲಿನ ವ್ಯತ್ಯಾಸಗಳು ಸಾಮಾನ್ಯವಾಗಿದೆ. ಕೆಲವು ನಿಮಿಷಗಳ ನಂತರ ಬೆಳಗಿನ ಜಾವದ ಮೊದಲು ಅದೇ ಪ್ರದೇಶದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.

ಪ್ರಬಲ ಭೂಕಂಪನದ ನಂತರ, ಅನೇಕ ನಿವಾಸಿಗಳು ಮತ್ತು ಪ್ರವಾಸಿಗರು ತಮ್ಮ ಮನೆಗಳು ಮತ್ತು ಹೋಟೆಲ್‌ಗಳಿಂದ ಎತ್ತರದ ನೆಲದ ಕಡೆಗೆ ಧಾವಿಸಿದರು. ಆದರೆ, ಭೂಕಂಪವು ಸುನಾಮಿಯನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಈ ಕಾರಣಕ್ಕೆ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳಿತು.

ಹಲವು ಸೆಕೆಂಡುಗಳವರೆಗೆ ಅಲ್ಲಾಡಿದ ಕಟ್ಟಡಗಳು, ಭಯಭೀತರಾದ ಜನರು: “ಹೋಟೆಲ್ ಗೋಡೆಗಳು ಬೀಳುತ್ತವೆ ಎಂದು ನಾನು ಭಾವಿಸಿದೆ” ಎಂದು ಆಸ್ಟ್ರೇಲಿಯಾದ ಪ್ರವಾಸಿಗರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ನೆರೆಯ ಪ್ರಾಂತ್ಯಗಳಾದ ಪೂರ್ವ ಜಾವಾ, ಮಧ್ಯ ಜಾವಾ, ಪಶ್ಚಿಮ ನುಸಾ ತೆಂಗರಾ ಮತ್ತು ಪೂರ್ವ ನುಸಾ ತೆಂಗರಾ ಪ್ರಾಂತ್ಯಗಳಲ್ಲಿನ ಜನರಿಗೆ ಭೂಮಿ ಕಂಪಸಿದ ಅನುಭವವಾಗಿದೆ. ಮನೆಗಳು ಮತ್ತು ಕಟ್ಟಡಗಳು ಹಲವು ಸೆಕೆಂಡುಗಳ ಕಾಲ ಅಲ್ಲಾಡಿದ್ದರಿಂದ ಜನರು ಭಯಭೀತರಾದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ