Breaking News

ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್‌ ಇಳಿಸಿದ ಮೊದಲ ದೇಶ ಭಾರತ! ಇತಿಹಾಸ ಸೃಷ್ಟಿಸಿದ ಇಸ್ರೋ!

Spread the love

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಭಾರತ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿತು.

ಇಡೀ ವಿಶ್ವವೇ ಎದುರು ನೀಡುತ್ತಿದ್ದ ಚಂದ್ರಯಾನ-3 ಗಗನ ನೌಕೆಯ ಲ್ಯಾಂಡರ್‌ ವಿಕ್ರಮ್‌ ಅನ್ನು ಇಸ್ರೋ ವಿಜ್ಞಾನಿಗಳು ಸಂಜೆ 6:04ಕ್ಕೆ ಸರಿಯಾಗಿ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್ ಮಾಡಿದರು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.

 

 

ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್‌ ಬ್ಯಾಹಾಕಾಶ ಕೇಂದ್ರದಿಂದ ಭಾರತದ ಚಂದ್ರಯಾನ-3 ಗಗಮನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿತ್ತು. ಅಂದಿನಿಂದ ಯೋಜನೆಯ ಯಶಸ್ಸಿಗಾಗಿ ಭಾರತ ಮಾತ್ರವಲ್ಲದೇ ಜಗತ್ತು ಹಾರೈಸಿ ಕಾತುರದಿಂದ ಕಾಯುತ್ತಿತ್ತು. ಭೂಮಿಯಿಂದ ನಭಕ್ಕೆ ಚಿಮ್ಮಿದ 41ನೇ ದಿನದ ನಂತರ ಇಂದು ಸಂಜೆ ಚಂದ್ರನನ್ನು ವಿಕ್ರಮ್‌ ಲ್ಯಾಂಡರ್‌ ಸ್ಪರ್ಶಿಸಿತು. ಈ ಮೂಲಕ ಭಾರತದ ಹೆಜ್ಜೆ ಗುರುತುಗಳು ಚಂದ್ರನೂರಿನಲ್ಲಿ ಮೂಡಿವೆ.

 

 

ಇಂದು ಸಂಜೆ ಸರಿಯಾಗಿ 5:20ಕ್ಕೆ ಚಂದ್ರನ ಮೇಲೆ ಲ್ಯಾಂಡರ್​ ಇಳಿಸುವ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಳು ಆರಂಭಿಸಿದ್ದರು. ಈ ಕೆಲಸ ಆರಂಭವಾಗುತ್ತಿದ್ದಂತೆ ಕೋಟ್ಯಂತರ ಭಾರತೀಯರ ಎದೆ ಬಡಿತವೂ ಕೂಡ ಹೆಚ್ಚುತ್ತಿತ್ತು. ಜಗತ್ತೇ ಕೂತುಹಲದಿಂದ ಎದುರು ನೋಡುತ್ತಿದ್ದ ಐತಿಹಾಸಿಕ ಪ್ರಕ್ರಿಯೆಯನ್ನು ಇಸ್ರೋ ನೇರಪ್ರಸಾರ ಮಾಡಿತ್ತು. ಗಣ್ಯರು ಸೇರಿದಂತೆ ಜನಸಾಮಾನ್ಯರೂ ಸಹ ವೀಕ್ಷಿಸುತ್ತಾ, ಎಲ್ಲೆಡೆ ಲ್ಯಾಂಡರ್‌ ಚಂದ್ರನ ಮೇಲೆ ‘ಮೃದು ಲ್ಯಾಂಡಿಂಗ್​ ಆಗಲಿ’ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಅಂತಿಮವಾಗಿ ಕೋಟ್ಯಂತರ ಜನರ ಆಶಯ, ಪ್ರಾರ್ಥನೆ ಫಲಿಸಿದೆ. ನಿಗದಿತ ಸಮಯದಂತೆ ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್​ ಇಳಿಯುವ ಮೂಲಕ ತನ್ನ ಪರಾಕ್ರಮ ಮರೆಯಿತು. ಚಂದ್ರನಿಗೆ ಸನಿಹವಾಗುತ್ತಿದ್ದಂತೆ ಹಾರಿಜಾಂಟರ್​ ಮಾದರಿಯಿಂದ ವರ್ಟಿಕಲ್​ ಮಾದರಿಗೆ ಲ್ಯಾಂಡರ್​ ಬಂದು ಚಂದ್ರನನ್ನು ಚುಂಬಿಸಿತು. ಭಾರತದ ಚಂದ್ರ ಚುಂಬನ ಯಶಸ್ವಿಯಾಗುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಸಂಭ್ರಮಾಚರಿಸಿದರು.


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ