Home / ರಾಜಕೀಯ / ಮಹದಾಯಿ ವಿಚಾರ ಮತ್ತೆ ಗರಿಗೆದರುವ ಸಾಧ್ಯತೆ

ಮಹದಾಯಿ ವಿಚಾರ ಮತ್ತೆ ಗರಿಗೆದರುವ ಸಾಧ್ಯತೆ

Spread the love

ಮಹದಾಯಿ ವಿಚಾರ ಮತ್ತೆ ಗರಿಗೆದರುವ ಸಾಧ್ಯತೆ ಇದೆ. . ಉತ್ತರ ಕರ್ನಾಟಕದಲ್ಲಿ ಜಲ ಹೋರಾಟ ಮತ್ತೊಮ್ಮೆ ತೀವ್ರ ಸ್ವರೂಪ ಪಡೆಯಲಿದೆ. ಹೀಗಾದರೆ ಈ ಬಾರಿಯ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ.

ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಮಹದಾಯಿ ಮತ್ತು ಕಳಸಾ ಭಂಡೂರಿ ಪ್ರಚಾರದ ಅಸ್ತ್ರ. ಯಾವುದೇ ಸರಕಾರ ಬಂದರೂ ಈ ಭಾಗದ ಪ್ರತಿಭಟನಾಕಾರರ ಹಾಗೂ ಜನರ ಬೇಡಿಕೆಗಳನ್ನು ಕಡೆಗಣಿಸುವ ಪ್ರಯತ್ನಗಳು ನಡೆಯುತ್ತಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ.

ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿರುವ ಮಹದಾಯಿ ಹೋರಾಟ ಮತ್ತೆ ಉಗ್ರ ಸ್ವರೂಪ ಪಡೆಯಲಿದೆ. ಇದೀಗ ಮತ್ತೆ ಸಂಘರ್ಷ ತೀವ್ರಗೊಳ್ಳಲಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಹದಾಯಿ ಮಹಾವೇದಿಕೆ ಹಾಗೂ ವಿವಿಧ ಸಂಘಟನೆಗಳು ವಿನೂತನ ರೀತಿಯಲ್ಲಿ ಹೋರಾಟ ನಡೆಸಿದ್ದವು. ಅಲ್ಲದೇ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ ಹುಬ್ಬಳ್ಳಿಯ ಕೇಂದ್ರ ಸಚಿವರ ಮನೆಗೆ ಕಾಲ್ನಡಿಗೆಯಲ್ಲಿ ಬಂದ ಪ್ರತಿಭಟನಾಕಾರರು ಮಳೆಯಲ್ಲೇ ಪ್ರತಿಭಟನೆ ನಡೆಸಿದರು.

ನ್ಯಾಯಾಧೀಕರಣ ತೀರ್ಪು ಬಂದು ಕೆಲವೇ ದಿನಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಹಲವು ಬೇಡಿಕೆಗಳನ್ನಿಟ್ಟು ಭರವಸೆ ನೀಡಿದ ಜನಪ್ರತಿನಿಧಿಗಳು ಯಾವುದೇ ರೀತಿಯ ಜವಾಬ್ದಾರಿ ವಹಿಸದೆ ಕೈತೊಳೆದುಕೊಂಡಿದ್ದಾರೆ.ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.ಕಾಮಗಾರಿ ವಿಳಂಬವಾದರೆ ಮತ್ತೊಂದು ಉಗ್ರ ಹೋರಾಟ ನಡೆಸುವುದಾಗಿ ಮಹದಾಯಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಈ ತಿಂಗಳೊಳಗೆ ಉ.ಕ.ಅಭಿವೃದ್ಧಿ ಹಾಗೂ ಮಹದಾಯಿ ಯೋಜನೆಗೆ ಚಾಲನೆ ನೀಡಬೇಕು, ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ