Breaking News

ಬೀದಿ ನಾಯಿ ರಕ್ಷಿಸಿದ ಕುಟುಂಬದ ಮೇಲೆ ದ್ವೇಷ: ಬಾಲಕನ ಥಳಿಸಿ ಕೊಂದ ನೆರೆಮನೆ ವ್ಯಕ್ತಿ

Spread the love

ಕುಶಿನಗರ (ಉತ್ತರ ಪ್ರದೇಶ): ಬೀದಿ ನಾಯಿಯ ರಕ್ಷಣೆಗೆ ಯತ್ನಿಸಿದ್ದ ನೆರೆಯ ಕುಟುಂಬದ ಮೇಲಿನ ಕೋಪದಿಂದ ವ್ಯಕ್ತಿಯೋರ್ವ ಆ ಕುಟುಂಬದ 12 ವರ್ಷದ ಬಾಲಕನನ್ನು ಕೊಲೆ ಮಾಡಿ ಶವ ಚರಂಡಿಗೆ ಎಸೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ನಡೆದಿದೆ.

 

ಇಲ್ಲಿನ ಮೈನ್​ಪುರ ಗ್ರಾಮದ ನಿವಾಸಿ ಮಧುಕರ್​ ಲಲಿತ್​ ತ್ರಿಪಾಠಿ ಎಂಬವರ ಪುತ್ರಿ ರಮಣ್ ತ್ರಿಪಾಠಿ ಕೊಲೆಯಾದ ಬಾಲಕ ಎಂದು ಗುರುತಿಸಲಾಗಿದೆ. ಇದೇ ಗ್ರಾಮದ ಶಮ್ಶುದ್ದೀನ್​ ಅಲಿಯಾಸ್​ ಮಾಂಗ್ರೂ ಎಂಬಾತನೇ ಬಾಲಕನ ಕೊಲೆಗೈದ ಹಂತಕ. ಈಗಾಗಲೇ ಈತನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಗುರುವಾರ ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ಘಟನೆಯ ಹಿನ್ನೆಲೆ: ”ಬಾಲಕ ರಮಣ್ ತ್ರಿಪಾಠಿ ಕಾಣೆಯಾಗಿರುವ ಬಗ್ಗೆ ಆಗಸ್ಟ್​ 1ರಂದು ಕಾಸಿಯಾ ಠಾಣೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಮನೆ ಸುತ್ತಮುತ್ತಲು ಹುಡುಕಾಡಿದರೂ ಪತ್ತೆಯಾಗುತ್ತಿಲ್ಲ ಎಂದು ತಮ್ಮ ದೂರಿನಲ್ಲಿ ಕುಟುಂಬಸ್ಥರು ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ ಮರುದಿನವೇ ಎಂದರೆ ಆಗಸ್ಟ್​ 2ರಂದು ಚರಂಡಿಯಲ್ಲಿ ಬಾಲಕನೋರ್ವನ ಶವ ದೊರೆತ ಬಗ್ಗೆ ಮಾಹಿತಿ ಸಿಕ್ಕಿತ್ತು” ಎಂದು ಪೊಲೀಸ್​ ಅಧಿಕಾರಿ ಕುಂದನ್​ ಸಿಂಗ್​ ತಿಳಿಸಿದ್ದಾರೆ.

”ಈ ಮೃತದೇಹವನ್ನು ಪರಿಶೀಲಿಸಿದಾಗ ಇದು, ನಾಪತ್ತೆಯಾಗಿದ್ದ ರಮಣ್ ತ್ರಿಪಾಠಿ ಎಂದೇ ಖಚಿತವಾಗಿದೆ. ಈ ವೇಳೆ ಮುಖಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಇದರಿಂದ ಹೆಚ್ಚಿನ ತನಿಖೆ ಕೈಗೊಂಡ ಬೀದಿ ನಾಯಿ ಕುರಿತಾಗಿ ಜಗಳ ನಡೆದ ವಿಷಯ ಗೊತ್ತಾಗಿದೆ. ಬಾಲಕ ನಾಪತ್ತೆಯಾಗುವ ಕೆಲ ದಿನಗಳ ಹಿಂದೆ ಬೀದಿ ನಾಯಿಗೆ ಆರೋಪಿ ಶಮ್ಶುದ್ದೀನ್​ ಥಳಿಸುತ್ತಿದ್ದ. ಗಮನಿಸಿದ ತ್ರಿಪಾಠಿ ಕುಟುಂಬ ಥಳಿತಕ್ಕೆ ಒಳಗಾಗುತ್ತಿದ್ದ ನಾಯಿಯನ್ನು ರಕ್ಷಿಸಿತ್ತು. ಈ ವೇಳೆ ಆರೋಪಿ ಅಲ್ಲಿಂದ ತೆರಳಿದ್ದ. ಆದರೆ, ಇದೇ ಕಾರಣಕ್ಕೆ ಆ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದ” ಎಂದು ಅವರು ​ಹೇಳಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ