Breaking News

ವಾಣಿಜ್ಯ ಸಿಲಿಂಡರ್ ದರ 99.75 ರೂಪಾಯಿ ಇಳಿಕೆ:

Spread the love

ನವದೆಹಲಿ: ದರ ಏರಿಕೆ ಬಿಸಿಯ ಮಧ್ಯೆ ವಾಣಿಜ್ಯ ಬಳಕೆ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​​ ಬೆಲೆಯನ್ನು ಇಳಿಕೆ ಮಾಡಲಾಗಿದೆ.

ಆಗಸ್ಟ್​ 1 ರಿಂದಲೇ ಜಾರಿಗೆ ಬರುವಂತೆ 19 ಕೆಜಿ ಗಾತ್ರದ ಸಿಲಿಂಡರ್ ದರದಲ್ಲಿ 99.75 ರೂಪಾಯಿಯನ್ನು ತೈಲ ಮಾರುಕಟ್ಟೆ ಕಂಪನಿಗಳು ಕಡಿತ ಮಾಡಿವೆ.

100 ಕಡಿತದ ಬಳಿಕ 1780 ರೂಪಾಯಿ ಇದ್ದ ಸಿಲಿಂಡರ್​ ಬೆಲೆ 1680 ಕ್ಕೆ ಸಿಗಲಿದೆ. ದೆಹಲಿಯಲ್ಲಿ 99.75 ರೂಪಾಯಿ ಇಳಿಕೆ ಮಾಡಲಾಗಿದ್ದರೆ, ಇತರ ಮಹಾನಗರಗಳಲ್ಲಿ 93 ರೂಪಾಯಿಯಷ್ಟು ಕಡಿತ ಮಾಡಲಾಗಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.

ದೇಶಾದ್ಯಂತ 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ. ದೆಹಲಿಯಲ್ಲಿ 99.75 ರೂಪಾಯಿ ಇಳಿಸಲಾಗಿದೆ. ಇತರ ಮಹಾನಗರಗಳಲ್ಲಿ 93 ರೂಪಾಯಿಗಳ ಕಡಿತವನ್ನು ಮಾಡಲಾಗಿದೆ. ಈಗ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ 1680 ರೂಪಾಯಿಗೆ ಲಭ್ಯವಿರುತ್ತದೆ. ಇದುವರೆಗೆ ಅದು 1780 ರೂಪಾಯಿ ದರ ಇತ್ತು. ದರ ಇಳಿಕೆ ಆದೇಶ ಇಂದಿನಿಂದಲೇ (ಆಗಸ್ಟ್ 1) ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತನ್ನ ವೆಬ್‌ಸೈಟ್‌ನಲ್ಲಿ ಹೊಸ ದರಗಳನ್ನು ನವೀಕರಿಸಿದ ಬಗ್ಗೆ ಮಾಹಿತಿ ನೀಡಿದೆ.

ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ 1895.50 ರೂ. ಇದ್ದು, ಈಗ 1802.50 ರೂ.ಗೆ ಸಿಗಲಿದೆ. ಮುಂಬೈನಲ್ಲಿ 1733.50 ರೂ.ಗೆ ಬದಲಾಗಿ 1640.50 ರೂ.ಗೆ ಲಭ್ಯವಾಗಲಿದೆ. ಚೆನ್ನೈನಲ್ಲಿ 1945 ರೂ. ಬದಲಿಗೆ 1852.50 ರೂ. (ರೂ. 92.50 ಇಳಿಕೆ) ಆಗಿದೆ. ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 93 ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ದರವನ್ನು ಈ ವರ್ಷ ಜುಲೈ 4 ರಂದು ಕೊನೆಯದಾಗಿ ಪರಿಷ್ಕರಿಸಲಾಗಿತ್ತು.

ಗೃಹ ಬಳಕೆ ಸಿಲಿಂಡರ್ ಬೆಲೆ​ ಇಳಿಕೆ ಇಲ್ಲ: 14.2 ಕೆಜಿ ಗಾತ್ರದ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಲಾಗಿಲ್ಲ. ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಈ ವರ್ಷದ ಮಾರ್ಚ್ 1 ರಂದು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1,103 ರೂಪಾಯಿ, ಕೋಲ್ಕತ್ತಾದಲ್ಲಿ 1,129 ರೂಪಾಯಿ, ಮುಂಬೈನಲ್ಲಿ 1,102.50 ರೂಪಾಯಿ, ಚೆನ್ನೈನಲ್ಲಿ 1,118.50 ರೂಪಾಯಿ ಕ್ರಯವಾಗುತ್ತಿದೆ.

ಎಲ್‌ಪಿಜಿ ಸಿಲಿಂಡರ್ ದರಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ಬೆಲೆ ಕಡಿತದ ನಂತರ ಜೂನ್‌ನಲ್ಲಿ ಈ ವರ್ಷದ ಮೊದಲ ಸಲ ಎಲ್‌ಪಿಜಿ ಸಿಲಿಂಡರ್ ದರಗಳನ್ನು ಹೆಚ್ಚಿಸಲಾಯಿತು. ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕೊನೆಯದಾಗಿ ಮಾರ್ಚ್ 1 ರಂದು ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಏರಿಕೆ ಮಾಡಲಾಗಿತ್ತು. ಅದಾದ ನಂತರ ದರದಲ್ಲಿ ಇಳಿಕೆ ಮಾಡುತ್ತಲೇ ಬರಲಾಗಿದೆ. ಏಪ್ರಿಲ್‌ನಲ್ಲಿ ಪ್ರತಿ ಸಿಲಿಂಡರ್‌ಗೆ 91.50 ರೂಪಾಯಿ, ಮೇ ತಿಂಗಳಿನಲ್ಲಿ 171.50 ರೂಪಾಯಿ, ಜೂನ್‌ನಲ್ಲಿ 83.50 ರೂಪಾಯಿ ಇಳಿಕೆ ಮಾಡಲಾಗಿತ್ತು.


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ