Breaking News

ತಮ್ಮ ಕಚೇರಿಯ ಗುಮಾಸ್ತನನ್ನು ಸರ್ಕಾರಿ ವಾಹನದಲ್ಲಿ ಮನೆಗೆ ಡ್ರಾಪ್​ ಮಾಡುವ ಮೂಲಕ ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ.

Spread the love

ಶಿವಮೊಗ್ಗ: ತಮ್ಮ ಕಚೇರಿಯ ಗುಮಾಸ್ತರೊಬ್ಬರು ವಯೋ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ವಿಶೇಷ ಗೌರವದೊಂದಿಗೆ ಅವರನ್ನು ಬೀಳ್ಕೊಟ್ಟು, ಎಲ್ಲರಿಗೂ ಮಾದರಿಯಾಗಿದ್ದಾರೆ.

ಸಾಗರದ ಉಪ ವಿಭಾಗಧಿಕಾರಿಯಾದ ಪಲ್ಲವಿ ಸಾತೇನಹಳ್ಳಿ ಅವರು ತಮ್ಮ ಕಚೇರಿಯಲ್ಲಿ ಡಿ ಗ್ರೂಪ್​ ನೌಕರರಾಗಿ ನಿವೃತ್ತಿಯಾದ ಕೃಷ್ಣಪ್ಪ ಅವರನ್ನು ತಮ್ಮ ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಮನೆಗೆ ಡ್ರಾಪ್‌ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.

ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಕೃಷ್ಣಪ್ಪ ಅವರು ಸೋಮವಾರ ವಯೋನಿವೃತ್ತಿ ಹೊಂದಿದರು. ನಿವೃತ್ತರಾದ ಪ್ರಯುಕ್ತ ಸಾಗರ ಉಪವಿಭಾಗಾಧಿಕಾರಿರವರ ಕಚೇರಿಯಲ್ಲಿ ಸಿಬ್ಬಂದಿಗಳೆಲ್ಲ ಸೇರಿ ಕೃಷ್ಣಪ್ಪ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದರು.

ಕೃಷ್ಣಪ್ಪ ಅವರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಡಿ ಗ್ರೂಪ್​ ನೌಕರರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಇವರು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರನ್ನು ಒಳಗೆ ಬಿಡುವ ಕೆಲಸವನ್ನು ನಿರ್ವಹಿಸುತ್ತಿದ್ದರು. ಉಪವಿಭಾಗಾಧಿಕಾರಿಗಳ ಕಚೇರಿ ಒಳಗೆ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳ ನಡುವೆ ಸೇತುಗೆಯಾಗಿ ಕೃಷ್ಣಪ್ಪ ಕಾರ್ಯ ನಿರ್ವಹಿಸುತ್ತಿದ್ದರು.

ಕೃಷ್ಣಪ್ಪ ಅವರ ವಯೋ ನಿವೃತ್ತಿಯಾಗಿರುವುದರಿಂದ ಅವರ ಸೇವೆಯನ್ನು ಗುರುತಿಸಿ ಉಪವಿಭಾಗಾಧಿಕಾರಿಗಳಾದ ಪಲ್ಲವಿ ಅವರು, ತಾವು ಓಡಾಡುವ ಸರ್ಕಾರಿ ವಾಹನದಲ್ಲಿ ಕೃಷ್ಣಪ್ಪ ಅವರನ್ನು ಮನೆಗೆ ತಲುಪಿಸಿ ವಿಶೇಷವಾಗಿ ಸೆಂಡ್​ ಅಪ್​ ಕೊಟ್ಟರು. ಡಿ ಗ್ರೂಪ್​ ಅಧಿಕಾರಿ ಎನ್ನುವ ಭೇದಭಾವ ತೋರದೇ ಇರುವ ಉಪವಿಭಾಗಾಧಿಕಾರಿಗಳ ಕಾರ್ಯ ಇತರರಿಗೆ ಮಾದರಿಯಾಗಿದ್ದು ಮಾತ್ರ ಸುಳ್ಳಲ್ಲ.

‘ಕೃಷ್ಣಪ್ಪ ಅವರು ತಾವು ಈ ಹುದ್ದೆಗೆ ಬಂದಾಗಿನಿಂದ ಇವರ ಕೆಲಸದ ಬಗ್ಗೆ ಸಾರ್ವಜನಿಕರಾಗಲಿ, ಅಧಿಕಾರಿಗಳಾಗಲಿ ಒಂದೇ ಒಂದು ದೂರು ಹೇಳಿಲ್ಲ. ನಮ್ಮ ಕೆಲಸದ ಕಾರ್ಯಭಾರವನ್ನು‌ ನೋಡಿಕೊಂಡು, ಜನರನ್ನು ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ಸಮಭಾವದಿಂದಲೇ ಒಳಗೆ ಬಿಡುತ್ತಿದ್ದರು. ಇವರ ಸೌಜನ್ಯದ ನಡೆಯಿಂದ ನಮ್ಮ ಕಚೇರಿಯಲ್ಲಿ ಆರೋಗ್ಯದ ವಾತಾವರಣ ನಿರ್ಮಾಣವಾಗಿತ್ತು. ಇವರ ನಿವೃತ್ತಿಯಿಂದ ಆ ಜಾಗಕ್ಕೆ ಯಾರನ್ನು ತರಬೇಕೆಂದು ನಾವು ಯೋಚನೆ ಮಾಡುತ್ತಿದ್ದೇವೆ. ಕೃಷ್ಣಪ್ಪ ಅವರ ಸ್ಥಾನಕ್ಕೆ ಇನ್ನೂ ಯಾರು ಸಿಕ್ಕಿಲ್ಲ. ಕೃಷ್ಣಪ್ಪನವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಶುಭ ಹಾರೈಸಿದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ