ಗದಗ: ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಎಸ್ಪಿ ಬಿ.ಎಸ್.
ನೇಮಗೌಡ ಅವರು ಮೊಬೈಲ್ಗಳನ್ನು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಳೆದುಕೊಂಡ ಮೊಬೈಲ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದೇವೆ. ಈ ಮೂಲಕ ಶನಿವಾರ ಒಟ್ಟು 82 ಮೊಬೈಲ್ಗಳನ್ನು ಸಾರ್ವಜನಿಕರಿಗೆ ಹಸ್ತಾಂತರಿಸಲಾಗಿದೆ. ನಗರದ ಟೌನ್ ಪಿಎಸ್ನಿಂದ 3, ರೂರಲ್ ಪಿಎಸ್ನಿಂದ- 5, ಬೆಟಿಗೇರಿ ಪಿಎಸ್ನಿಂದ- 2, ಲಕ್ಷ್ಮೇಶ್ವರ ಪಿಎಸ್- 3, ಶಿರಹಟ್ಟಿ ಪಿಎಸ್- 3, ನರಗುಂದ ಪಿಎಸ್- 5, ರೋಣ ಪಿಎಸ್- 8, ಗಜೇಂದ್ರಗಡ ಪಿಎಸ್- 4, ಮುಂಡರಗಿ ಪಿಎಸ್- 10, ನರೇಗಲ್ ಪಿಎಸ್- 1, ಸಿಇಎನ್ಪಿಎಸ್- 6, ಟೆಕ್ ಸೆಲ್- 28 ಸೇರಿದಂತೆ ಒಟ್ಟು 12 ಲಕ್ಷ 11 ಸಾವಿರ ಬೆಲೆ ಬಾಳುವ 82 ಮೊಬೈಲ್ ಹಸ್ತಾಂತರಿಸಿದ್ದೇವೆ” ಎಂದರು.
ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ಗಳನ್ನು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಜಾಗೃತಿಯಿಂದ ಇಟ್ಟುಕೊಳ್ಳಬೇಕು ಎಂದು ಅವರು, ಮೊಬೈಲ್ ಪತ್ತೆಗಾಗಿ ನಾವು ವಿಶೇಷ ಜಾಗೃತಿ ವಹಿಸುತ್ತಿದ್ದು, ಮೊಬಿಫೈ ಹಾಗೂ ಸಿಈಆರ್ಐನಲ್ಲಿ ಕಳೆದುಹೋದ ಮೊಬೈಲ್ ಪತ್ತೆಗೆ ಕ್ರಮ ವಹಿಸುತ್ತೇವೆ ಎಂದರು. ಶನಿವಾರ ಹಸ್ತಾಂತರಿಸಿದ ಮೊಬೈಲ್ಗಳನ್ನು ಅಂತರ್ ಜಿಲ್ಲೆ ಹಾಗೂ ಅಂತರ ರಾಜ್ಯದಿಂದ ಪತ್ತೆ ಹಚ್ಚಿ ತಂದಿದ್ದೇವೆ. ಮೊಬೈಲ್ ಪತ್ತೆಹಚ್ಚಲು ಶ್ರಮವಹಿಸಿದ ಪೊಲೀಸ್ ಸಿಬ್ಬಂದಿಗೆ ಬಹುಮಾನ ನೀಡಲಾಗುವುದು ಎಂದು ಎಸ್ಪಿ ಬಿ.ಎಸ್. ನೇಮಗೌಡ ತಿಳಿಸಿದರು.
Laxmi News 24×7