Breaking News

ಕೊಳಚೆ ನೀರಿನೊಂದಿಗೆ ಮನೆಗೆ ಬಂದ ಹಾವು

Spread the love

ಹೈದರಾಬಾದ್​: ಕಳೆದೊಂದು ವಾರದಿಂದ ಹೈದರಾಬಾದ್ ನಗರದಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಈ ಮಳೆಯಿಂದಾಗಿ ರಸ್ತೆಗಳು, ಕಾಲೋನಿಗಳು ಮುಳುಗಡೆಯಾಗುತ್ತಿವೆ.

ಕೆಲವೆಡೆ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಕೊಳಚೆ ನೀರಿನ ಜತೆಗೆ ಕ್ರಿಮಿ, ಹಾವುಗಳೂ ಮನೆಗಳಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಸಿಕಂದರಾಬಾದ್‌ನ ಅಲ್ವಾಲ್ ಪ್ರದೇಶದಲ್ಲಿ ಸಂಪತ್ ಎಂಬ ವ್ಯಕ್ತಿಯ ಮನೆಗೆ ಕೊಳಚೆ ನೀರಿನೊಂದಿಗೆ ಹಾವು ಬಂದಿದ್ದರಿಂದ ಕುಟುಂಬದ ಸದಸ್ಯರು ಭಯಭೀತರಾಗಿದ್ದರು.

ಅಧಿಕಾರಿಯೊಬ್ಬರ ಮೇಜಿನ ಮೇಲೆ ಹಾವನ್ನು ಬಿಟ್ಟ ನಿವಾಸಿ: ಹಾವು ಮನೆಗೆ ಬಂದದ್ದನ್ನು ಕಂಡ ಸಂಪತ್ ಅವರು ಜಿಹೆಚ್‌ಎಂಸಿ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆರು ಗಂಟೆ ಕಳೆದರೂ ಅಧಿಕಾರಿಗಳು ಬಾರದೇ ಇದ್ದಾಗ ಆಕ್ರೋಶ ವ್ಯಕ್ತಪಡಿಸಿದ ಸಂಪತ್ ಹಾವನ್ನು ಪೆಟ್ಟಿಗೆಯಲ್ಲಿ ಹಾಕಿದ್ದಾರೆ. ಆ ಬಳಿಕ ತಾಳ್ಮೆ ಕಳೆದುಕೊಂಡು ನೇರವಾಗಿ ಜಿಎಚ್‌ಎಂಸಿ ವಾರ್ಡ್‌ ಕಚೇರಿಗೆ ತೆರಳಿದ್ದಾರೆ. ಅಲ್ಲಿ ಅಧಿಕಾರಿಯೊಬ್ಬರ ಮೇಜಿನ ಮೇಲೆ ಹಾವನ್ನು ಬಿಟ್ಟು ಅವರ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.

ಮಳೆಯಿಂದ ನಗರದಲ್ಲಿ ಸಮಸ್ಯೆಗಳು ಹೆಚ್ಚಳ: ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಜಿಎಚ್‌ಎಂಸಿ ವಿರುದ್ಧ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದ ನಗರದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು, ಸಹಾಯಕ್ಕಾಗಿ ನಗರದ ನಿವಾಸಿಗಳು 9000113667 ನಂಬರ್​ ಅನ್ನು ಸಂಪರ್ಕಿಸುವಂತೆ ಜಿಎಚ್‌ಎಂಸಿ ಮನವಿ ಮಾಡಿದೆ. ಈ ಘಟನೆಯಿಂದ ಈ ಜಿಹೆಚ್​ಎಂಸಿ ಕಾಲ್ ಸೆಂಟರ್​ನ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತಿದೆ. ಮತ್ತೊಂದೆಡೆ, ಈ ಬಗ್ಗೆ ಯಾವುದೇ ಜಿಎಚ್‌ಎಂಸಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.


Spread the love

About Laxminews 24x7

Check Also

ಸಾರಿಗೆ ಸಂಸ್ಥೆ ಬಸ್ ಹರಿದು ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿದೆ.

Spread the loveರಾಯಚೂರು: ಸಾರಿಗೆ ಸಂಸ್ಥೆ ಬಸ್ ಹರಿದು ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ