Breaking News

ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ – ಗದಗ ನಡುವೆ ವೋಲ್ವೊ ಬಸ್

Spread the love

ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಗದಗ ನಡುವೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ಸೌಲಭ್ಯ ಕಲ್ಪಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ.

ಹುಬ್ಬಳ್ಳಿ ಮತ್ತು ಗದಗ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಕಲ್ಪಿಸುವ ನಿಟ್ಟಿನಲ್ಲಿ ವೋಲ್ವೊ ಎಸಿ ಬಸ್​ಗಳನ್ನು ಆರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

ಹುಬ್ಬಳ್ಳಿ ಹಾಗೂ ಗದಗ ಭಾಗದ ಸಾರ್ವಜನಿಕರ ಬೇಡಿಕೆಯ ಮೇರೆಗೆ ಹುಬ್ಬಳ್ಳಿ- ಗದಗ ನಡುವೆ ತಡೆ ರಹಿತ ವೋಲ್ವೊ ಎಸಿ ಬಸ್​ಗಳ ಸಂಚಾರ ಪ್ರಾರಂಭಿಸಲಾಗಿದೆ. ಈ ಬಸ್​ಗಳು ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹಾಗೂ ಗದಗ ಹಳೆ ಬಸ್ ನಿಲ್ದಾಣದಿಂದ ಹೊರಟು ಹೊಸ ಬಸ್ ನಿಲ್ದಾಣದ ಮಾರ್ಗದ ಮೂಲಕ ಸಂಚರಿಸುತ್ತವೆ.

ಹುಬ್ಬಳ್ಳಿಯಿಂದ ವೋಲ್ವೊ ಹೊರಡುವ ಸಮಯ: ಬೆಳಗ್ಗೆ 8-00, 8-30 11-15, 11-30, ಮಧ್ಯಾಹ್ನ 2-30, 3-00, ಸಂಜೆ 5-30 ಹಾಗೂ 6-00 ಗಂಟೆಗೆ ಪ್ರತಿದಿನದ ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಗದಗ ನಗರಕ್ಕೆ ಹೊರಡಲಿವೆ.

ಗದಗದಿಂದ ಹುಬ್ಬಳ್ಳಿಗೆ ಹೊರಡುವ ಸಮಯ: ಬೆಳಗ್ಗೆ 9-30, 10-00, ಮಧ್ಯಾಹ್ನ 12-45, 1:00, ಸಂಜೆ 4-00, 4-30, 7-00 ಹಾಗೂ 7-30 ಗಂಟೆಗೆ ಗದಗ ಹಳೆ ಬಸ್ ನಿಲ್ದಾಣದಿಂದ ಹಬ್ಬಳ್ಳಿಗೆ ಸಂಚರಿಸಲಿದೆ.

ವೋಲ್ವೊ ಬಸ್​ಗೆ ಪ್ರಯಾಣದರ ಏಷ್ಟು?: ಪ್ರಸ್ತುತ ಹುಬ್ಬಳ್ಳಿ – ಗದಗ ನಡುವೆ ಸಂಚರಿಸುವ ತಡೆ ರಹಿತ ವೇಗದೂತ ಬಸ್​ಗಳ ಪ್ರಯಾಣ ದರ ರೂ.75 ಇರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ವೋಲ್ವೊ ಬಸ್​ಗೆ ಪ್ರೋತ್ಸಾಹಕ ಪ್ರಯಾಣದರ ರೂ. 90 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹುಬ್ಬಳ್ಳಿ ಪ್ರಾದೇಶಿಕ ಬಸ್ ನಿಲ್ದಾಣದ ಮೊಬೈಲ್ ಸಂಖ್ಯೆ: 77609 91662 / 77609 91685, ಗದಗ ಹಳೆ ಬಸ್ ನಿಲ್ದಾಣ: 77609 73408, ಗದಗ ಹೊಸ ಬಸ್ ನಿಲ್ದಾಣ: 77609 73409 ನಂಬರ್​ಗೆ ಸಂಪರ್ಕಿಸಬಹುದು.


Spread the love

About Laxminews 24x7

Check Also

ಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

Spread the loveಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ