Breaking News

ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್ ವಶಕ್ಕೆ: ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾಹಿತಿ

Spread the love

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಡಿ ಐವರು ಶಂಕಿತ ಭಯೋತ್ಪಾದಕರನ್ನ ಬಂಧಿಸಿರುವ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಪ್ರಕರಣದ‌ ಐದನೇ ಆರೋಪಿ ಜಾಯಿದ್ ತಬರೇಜ್ ನ ಕೊಡಿಗೆಹಳ್ಳಿಯಲ್ಲಿರುವ ಮನೆಯಲ್ಲಿದ್ದ ನಾಲ್ಕು ಜೀವಂತ ಗ್ರೆನೇಡ್ ಜಪ್ತಿ ಮಾಡಿದ್ದಾರೆ.

ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಆರೋಪದಡಿ ಸುಹೇಲ್, ಜಾಹಿದ್, ಮುದಾಸಿರ್, ಫೈಜರ್ ಹಾಗೂ ಉಮರ್ ಎಂಬುವರನ್ನು ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿ 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, 4 ವಾಕಿಟಾಕಿ, 2 ಡ್ರ್ಯಾಗರ್, ಹಾಗೂ 12 ಮೊಬೈಲ್​ಗಳನ್ನು ಜಪ್ತಿ ಮಾಡಿಕೊಂಡಿತ್ತು. ಇದೀಗ ಕೊಡಿಗೆಹಳ್ಳಿಯಲ್ಲಿರುವ ಜಾಹಿದ್ ಮನೆಯಲ್ಲಿ 4 ಜೀವಂತ ಗ್ರೆನೇಡ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಮಾಹಿತಿ ನೀಡಿದ್ದಾರೆ.

ಮನೆಯ ಅಲ್ಮೇರಾದಲ್ಲಿ ಇಟ್ಟು ಲಾಕ್ ಮಾಡಿದ್ದ ಶಂಕಿತ ಉಗ್ರ: ಜನಸಂದಣಿ ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪಿಗಳು ತಲೆಮರೆಸಿಕೊಂಡಿರುವ ಜುನೈದ್ ಖಾನ್ ಸೂಚನೆ ಮೇರೆಗೆ ಆರೋಪಿಗಳೆಲ್ಲರೂ ಕೃತ್ಯವೆಸಗಲು ಸಿದ್ಧತೆ ನಡೆಸಿದ್ದರು. ವಿದೇಶದಲ್ಲಿರುವ ಜುನೈದ್ ವ್ಯಕ್ತಿಯೋರ್ವನ ಮುಖಾಂತರ ಜಾಹಿದ್​ಗೆ ಪಾರ್ಸೆಲ್ ಮೂಲಕ ನಾಲ್ಕು ಗ್ರೆನೇಡ್ ಕಳುಹಿಸಿಕೊಟ್ಟಿದ್ದ. ಇದನ್ನ ಸುರಕ್ಷಿತವಾಗಿ ಇರಿಸುವಂತೆ ಸೂಚಿಸಿದ್ದ. ಇದರಂತೆ ಮನೆಯ ಕೊಠಡಿಯ ಅಲ್ಮೇರಾದಲ್ಲಿ ಇಟ್ಟು ಲಾಕ್ ಮಾಡಿಕೊಂಡಿದ್ದ.

ಪಾರ್ಸೆಲ್​ನಲ್ಲಿ ಗ್ರೆನೇಡ್ ಇರುವುದರ ಬಗ್ಗೆ ಜಾಯಿದ್​ಗೂ ಗೊತ್ತಿರಲಿಲ್ಲ. ಆದರೆ ವಿದ್ವಂಸಕ ಕೃತ್ಯವೆಸಗಲು ಸಾಧನ-ಸಲಕರಣೆ ಇರುವುದನ್ನ ಮನಗಂಡಿದ್ದ. ಸಿಸಿಬಿ ವಿಚಾರಣೆ ನೀಡಿದ ಮಾಹಿತಿ ಮೇರೆಗೆ ಸಿಸಿಬಿ, ಎಫ್​ಎಸ್​ಎಲ್, ಬಾಂಬ್ ನಿಷ್ಕ್ರಿಯ ದಳ ತಂಡಗಳು ತೆರಳಿ ಪರಿಶೀಲನೆ‌ ನಡೆಸಿ ಖಚಿತಪಡಿಸಿಕೊಂಡ ಬಳಿಕ ಗ್ರೈನೆಡ್​ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.

ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ: ಬಂಧಿತ ಐವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ‌. ಎಷ್ಟು ದಿನಗಳಿಂದ ಕೃತ್ಯವೆಸಗಲು ಸಂಚು ರೂಪಿಸಿದ್ದರು‌. ಎಲ್ಲೆಲ್ಲಿ ಸ್ಪೋಟಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು ಎಂಬುದರ ಬಗ್ಗೆ ಈ ಹಂತದಲ್ಲಿ ಮಾಹಿತಿ ನೀಡಲು ಅಸಾಧ್ಯ‌. ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಹೇಳಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್​ ಕಳುಹಿಸಲಾಗಿದೆ: ಬಂಧಿತ ಶಂಕಿತರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ವಶಕ್ಕೆ ಪಡೆದುಕೊಂಡಿದ್ದ 12 ಮೊಬೈಲ್​ಗಳನ್ನ ರಿಟ್ರೀವ್ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಐವರ ವಿಚಾರಣೆ ಮುಕ್ತಾಯದ ಬಳಿಕ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳನ್ನ ಕರೆಯಿಸಿ ವಿಚಾರಣೆ ನಡೆಸಲಾಗುವುದು. ಪ್ರಕರಣದ ಪ್ರಮುಖ ಹಾಗೂ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿರುವ ಟಿ. ನಜೀರ್​ನನ್ನು ಬಾಡಿ ವಾರೆಂಟ್ ಮೇರೆಗೆ ಕಸ್ಟಡಿಗೆ ಪಡೆಯಲಾಗುವುದು ಎಂದು ಅವರು ವಿವರಿಸಿದರು.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಿಸಿರುವ ಸರ್ಕಾರದ ತೀರ್ಮಾನ ಸ್ವಾಗತಿಸಿದ ಬಿಜೆಪಿ ನಾಯಕರು

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 100 ರೂ.‌ ಹೆಚ್ಚಿಸಿರುವ ಸರ್ಕಾರದ ತೀರ್ಮಾನವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.‌ ಈ ಸಂಬಂಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ