Breaking News

ರಾಯಚೂರು ಜಿಲ್ಲಾ ಪಂಚಾಯತಿಯಲ್ಲಿದೆ ಉದ್ಯೋಗ; 35 ಸಾವಿರ ರೂಪಾಯಿ ವೇತನ

Spread the love

ರಾಯಚೂರು ಜಿಲ್ಲಾ ಪಂಚಾಯತ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಮೆರಿಟ್‌ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಹುದ್ದೆಗಳ ಭರ್ತಿ ನಡೆಯುತ್ತದೆ.

ಹುದ್ದೆಗಳು ತಾತ್ಕಾಲಿಕವಾಗಿದ್ದು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.

ಹುದ್ದೆಗಳ ವಿವರ : ರಾಯಚೂರು ಜಿಲ್ಲಾ ಪಂಚಾಯತ್​ನಿಂದ ಮನರೇಗಾ ಅಡಿಯಲ್ಲಿ ಬ್ಲಾಕ್​ ಲೈವ್ಲಿಹುಡ್​​ ಎಕ್ಸ್​ಪರ್ಟ್​​, ಬ್ಲಾಕ್​ ಎನ್​ಆರ್​ಎಂ ಎಕ್ಸ್​​ಪರ್ಟ್ ಸೇರಿದಂತೆ ಒಟ್ಟು 8​​ ಹುದ್ದೆಗಳು.

ವಿದ್ಯಾರ್ಹತೆ : ಮಾಹಿತಿ ವಿಜ್ಞಾನ, ರಿಮೋಟ್​ ಸೆನ್ಸಿಂಗ್​ ಮತ್ತು ಜಿಐಎಸ್​/ಜಿಇಒ ಸ್ಪೇಷಿಯಲ್​ ಟೆಕ್ನಾಲಜಿ ಸೇರಿದಂತೆ ಇನ್ನಿತರ ವಿಷಯದಲ್ಲಿ ಬಿಇ, ಬಿಟೆಕ್​ ಪದವಿ. ಬ್ಲಾಕ್​ ಲೈವ್ಲಿಹುಡ್​​ ಎಕ್ಸ್​ಪರ್ಟ್​​ ಹುದ್ದೆಗೆ ಕೃಷಿ ಆರ್ಥಿಕತೆ, ತೋಟಗಾರಿಕೆ, ಅರಣ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಒಂದು/ ಎರಡು ವರ್ಷದ ಅನುಭವ ಹೊಂದಿರಬೇಕು.

ವೇತನ : ಬ್ಲಾಕ್​ ಜಿಐಎಸ್​ ಎಕ್ಸ್‌ಪರ್ಟ್​ ಹುದ್ದೆಗೆ 35 ಸಾವಿರ ರೂ ಮತ್ತು ಬ್ಲಾಕ್ ಲೈವ್ಲಿಹುಡ್​ ಎಕ್ಸ್​ಪರ್ಟ್​​ ಹುದ್ದೆಗೆ 30 ಸಾವಿರ ರೂ ವೇತನವಿದೆ.

ವಯೋಮಿತಿ: 21ರಿಂದ 40 ವರ್ಷ.

ಅಭ್ಯರ್ಥಿಗಳನ್ನು ಮೆರಿಟ್​ ಲಿಸ್ಟ್​ ಮತ್ತು ಅನುಭವದ ಮೇಲೆ ಆಯ್ಕೆ ಮಾಡಲಾತ್ತದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇಲ್ಲ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ: ಜಿಲ್ಲಾ ಪಂಚಾಯತ್​​ ಹುದ್ದೆಗಳ ಭರ್ತಿಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲಿ ಯಾವ ಜಿಲ್ಲಾ ಪಂಚಾಯತ್​ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಬಳಿಕ ಕೇಳಲಾದ ಮತ್ತಿತರ ವಿವರಗಳನ್ನು ತುಂಬುವುದು ಕಡ್ಡಾಯ.

ಅರ್ಜಿ ಸಲ್ಲಿಕೆ ಜುಲೈ 15ರಿಂದ ಆರಂಭವಾಗಲಿದೆ. ಅಂತಿಮ ದಿನ ಜುಲೈ 24 ಆಗಿದೆ. ಆಯ್ಕೆಯ ಮೆರಿಟ್​ ಪಟ್ಟಿಯನ್ನು ಆಗಸ್ಟ್​​ 10ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು zpraichur.kar.nic.in ಜಾಲತಾಣಕ್ಕೆ ಭೇಟಿ ನೀಡಬಹುದು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ