Breaking News

ವಿಸ್ಮಯಕಾರಿ ಘಟನೆ..ನಿಬ್ಬೆರಗಾದ ಜನ..ಆಂಜನೇಯನಿಗೆ ಕೈಮುಗಿದು ಪ್ರಾಣಬಿಟ್ಟ ಕೋತಿ.!

Spread the love

ಬೆಂಗಳೂರು: ಕೋತಿಯೊಂದು ವೀರಾಂಜನೇಯ ಸ್ವಾಮಿಗೆ ನಮಸ್ಕರಿಸಿ ಅಲ್ಲಿಯೇ ಪ್ರಾಣಬಿಟ್ಟಿರುವ ಅಪರೂಪದ ಘಟನೆಯೊಂದು ಬೆಂಗಳೂರಿನ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ.

ಇಲ್ಲಿನ ರಾಮನಾಯಕನಹಳ್ಳಿಯ ವಿರಾಂಜನೇಯಸ್ವಾಮಿ ದೇವಾಲಯದ ಮುಖ್ಯದ್ವಾರದ ಬಳಿ ತಲೆಯಿಟ್ಟು ಕೋತಿಯೊಂದು ಕೈಮುಗಿದ ರೀತಿಯಲ್ಲಿ ಸಾವನ್ನಪ್ಪಿದೆ.

ಇದನ್ನು ಕಂಡ ಗ್ರಾಮಸ್ಥರು ಇದೆಂತಹ ವಿಸ್ಮಯವೆಂದು ಉದ್ಘರಿಸಿದ್ದಾರೆ.

ವೀರಾಂಜನೇಯನ ದೇವಸ್ಥಾನದ ಬಳಿ ಕೋತಿಯೊಂದು ಯಾವಾಗಲೂ ಓಡಾಡಿಕೊಂಡು ಇತ್ತು. ಜುಲೈ 17ರಂದು ಭೀಮನ ಅಮವಾಸ್ಯೆ ದಿನ ದೇವಾಲಯದ ಅರ್ಚಕ ರಾಮಕೃಷ್ಣಯ್ಯ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಎಂದಿನಂತೆ ದೇವಸ್ಥಾನಕ್ಕೆ ಬಂದಾಗ ಕೋತಿ ದೇವಾಲಯದ ಬಾಗಿಲು ಬಳಿ ಮಲಗಿರುವುದನ್ನು ನೋಡಿದ್ದಾರೆ. ಸಮೀಪಕ್ಕೆ ಬಂದು ನೋಡಿದಾಗ ಕೋತಿ ಕೈಮುಗಿದುಕೊಂಡಿರುವ ರೀತಿಯಲ್ಲಿ ಸಾವನ್ನಪ್ಪಿರುವುದು ಗೊತ್ತಾಗಿದೆ.


Spread the love

About Laxminews 24x7

Check Also

ಬಿಎಂಐಸಿ ಯೋಜನೆಯನ್ನು ಮರುಪರಿಶೀಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್

Spread the loveಬೆಂಗಳೂರು: ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿಲೋ ಮೀಟರ್‌ ಮಾತ್ರ ನಿರ್ಮಾಣಗೊಂಡಿರುವ ಬೆಂಗಳೂರು ಮೈಸೂರು ಮೂಲ ಸೌಕರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ