Breaking News

ಜಿಲ್ಲೆಯಲ್ಲಿ ಡ್ರಗ್ಸ್​ ಮಾರಾಟಗಾರರು ಹೆಚ್ಚಾಗಿದ್ದು, ಮಾರಾಟಕ್ಕೆ ಬ್ರೇಕ್ ಹಾಕಲು ಪೋಲಿಸ್ ಇಲಾಖೆ ಸಜ್ಜಾ

Spread the love

ಕೊಡಗು: ಜಿಲ್ಲೆಯಲ್ಲಿ ಡ್ರಗ್ಸ್​ ಮಾರಾಟಗಾರರು ಹೆಚ್ಚಾಗಿದ್ದು, ಮಾರಾಟಕ್ಕೆ ಬ್ರೇಕ್ ಹಾಕಲು ಪೋಲಿಸ್ ಇಲಾಖೆ ಸಜ್ಜಾಗಿದೆ.

ಈ ಒಂದು ಕ್ರಮದಲ್ಲಿ ಪೊಲೀಸರು, ಮಾರಾಟಗಾರರು ಮತ್ತು ಸೇವನೆ ಮಾಡುತ್ತಿದ್ದ ವ್ಯಕ್ತಿಗಳನ್ನು ಸೇರಿ ಜಿಲ್ಲೆಯಲ್ಲಿ 25 ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ಆರೋಪಿಗಳ ಬಳಿ ಇದ್ದ ಗಾಂಜಾ , ಎಲ್​ಎಸ್​ಡಿ ಡ್ರಗ್ಸ್​ ಜಪ್ತಿ ಮಾಡಿದ್ದಾರೆ.

ಬಂಧಿತರಲ್ಲಿ 14 ಜನ ಪ್ರವಾಸಿಗರಿದ್ದು, ಇವರು ಹೋಂ ಸ್ಟೇಯೊಂದರಲ್ಲಿ ಮಾದಕವಸ್ತು ಸೇವಿಸುತ್ತಿದ್ದರು. ಅಲೀಂ ಅಹ್ಮದ್, ಮೋಸಿನ್, ಸಾಗರ್, ರೆಹಮಾನ್, ಚೇತನ್, ಶಮೀರ್, ನಿಸಾರ್, ಜಬ್ಬಾರ್, ಇಮ್ರಾನ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 1.7 ಕೆಜಿ ಗಾಂಜಾ, ಎಲ್​ಎಸ್​ಡಿ ಮಾತ್ರೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕೆಲವು ದಿನಗಳಿಂದಷ್ಟೇ ಜಿಲ್ಲೆಯಲ್ಲಿ 6 ಡ್ರಕ್ಸ್ ಮಾರಾಟಗಾರನ್ನು ಬಂಧಿಸಲಾಗಿದ್ದು, ಈಗ 25 ಜನರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಹೋಂ ಸ್ಟೇ ಮಾಲೀಕನೂ ಇದ್ದು, ಪೊಲೀಸರು ಎಲ್​ಎಸ್​ಡಿ ಡ್ರಗ್ಸ್ ಹಾಗೂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಮಕ್ಕಂದೂರಿನಲ್ಲಿರುವ ಹೋಂ ಸ್ಟೇಯೊಂದರಲ್ಲಿ 14 ಟೂರಿಸ್ಟ್ ಹುಡುಗರು ಬಂದಿದ್ದರು. ತಮಗೆ ಬಂದ ಮಾಹಿತಿ ಆಧಾರದ ಮೇಲೆ ನಾವು ಹೋಮ್ ಸ್ಟೇ ಮೇಲೆ ದಾಳಿ ನಡೆಸಿದ್ದೇವೆ. ಮಂಗಳೂರು ಮೂಲದ ಯುವಕರು 414 ಗ್ರಾಮ್​ಗಳಷ್ಟು ಗಾಂಜಾ ಹಾಗೂ 9 ಎಲ್​ಎಸ್​ಡಿಗಳನ್ನು ಹೊಂದಿದ್ದರು ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.

ಹೃತಿಕ್ (23), ವಿಘ್ನೇಶ್ ಅಜಿತ್ (21), ಸುಮನ್ ಎಚ್ (26), ಚಿರಾಗ್ ಎಸ್ (24), ಮಂಜುನಾಥ್ (30), ಲತೀಶ್ ನಾಯಕ್ (32), ಸಚಿನ್ (26), ರಾಹುಲ್ (26), ಪ್ರಜ್ವಲ್ (32), ಅವಿನಾಶ್ (28), ಪ್ರತೀಕ್ ಕುಮಾರ್ (27), ಧನುಷ್ (28), ರಾಜೇಶ್ (45) ಮತ್ತು ದಿಲ್ರಾಜ್ (30) ಬಂಧಿತ ಯುವಕರಾಗಿದ್ದು, ಎಲ್ಲರೂ ಮಂಗಳೂರು ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ