Breaking News

ಕುಡಿಯಲು ಹಣ ನೀಡುವಂತೆ ಮನೆಯವರಿಗೆ ಪೀಡಿಸುತ್ತಿದ್ದ ಯುವಕನ ಹೊಡೆದು ಕೊಂದ ತಂದೆ, ಸಹೋದರ!

Spread the love

ಚಿಕ್ಕೋಡಿ: ಕುಡಿತದ ಚಟಕ್ಕೆ ದಾಸನಾಗಿ ಕುಟುಂಬಸ್ಥರನ್ನು ಪೀಡಿಸುತ್ತಿದ್ದ ಯುವಕನನ್ನು ಸ್ವಂತ ತಂದೆ ಮತ್ತು ಅಣ್ಣನೇ ಹೊಡೆದು ಸಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸೋಮಯ್ಯ ಮಹಾಲಿಂಗಯ್ಯ ಹಿರೇಮಠ (24) ಮೃತ ದುರ್ದೈವಿ. ಆರೋಪಿಗಳಾದ ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ, ಬಸಯ್ಯ ಹಿರೇಮಠ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾರುಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ : ಜುಲೈ 10ರಂದು ಸೋಮಯ್ಯ ಮದ್ಯಪಾನ ಮಾಡಲು ಹಣ ನೀಡುವಂತೆ ಕುಟುಂಬಸ್ಥರಿಗೆ ಬೇಡಿಕೆ ಇಟ್ಟಿದ್ದಾನೆ. ಪ್ರತಿನಿತ್ಯ ಕುಡಿದು ಬಂದು ರಾತ್ರಿಯಿಡೀ ಮನೆಯಲ್ಲಿ ಜಗಳ ಮಾಡುತ್ತಿದ್ದ ಈತನ ವರ್ತನೆಯಿಂದ ಮನೆಯವರು ರೋಸಿ ಹೋಗಿದ್ದರಂತೆ. ಕಳೆದ ಸೋಮವಾರ ಕಲಹ ತೀವ್ರ ಸ್ವರೂಪಕ್ಕೆ ತಿರುಗಿದೆ. ಉಪಟಳ ತಾಳಲಾರದೆ ಮದ್ಯಪಾನ ವ್ಯಸನಿಯ ತಲೆಗೆ ತಂದೆ ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ ಹೊಡೆದಿದ್ದಾರೆ. ಸೋಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಯುವಕನ ಅಂತ್ಯಕ್ರಿಯೆ ಮಾಡಲಾಗಿದೆ. ಬಳಿಕ, ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮೃತ ಯುವಕನ ತಂದೆ ಹಾಗೂ ಸಹೋದರರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆಗಾಗಿ ಚಿತಾಗಾರದಿಂದ ಅಸ್ಥಿಪಂಜರದ ಕೆಲವು ಭಾಗಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಬೆಳಗಾವಿ ಎಸ್​ಪಿ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಬಾರದು ಬಪ್ಪದು, ಬಪ್ಪದು ತಪ್ಪದು ಸಚಿವ ಸ್ಥಾನದ ಕುರಿತ ಪ್ರಶ್ನೆಗೆ ಶಾಸಕ ಲಕ್ಷ್ಮಣ್ ಸವದಿ ಅವರು ಈ ರೀತಿ ನಯವಾಗಿ ಉತ್ತರ ನೀಡಿದರು.

Spread the loveಚಿಕ್ಕೋಡಿ: ದೇಶದಲ್ಲಿ ಆರ್​​ಎಸ್​ಎಸ್​ ಬ್ಯಾನ್ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್​ ಖರ್ಗೆ ರಾಜಕೀಯ ಹೇಳಿಕೆ ನೀಡಿರಬಹುದು. ಅದರ ಬಗ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ