ಬೆಂಗಳೂರು : ರಾಜಧಾನಿಯಲ್ಲಿ ಮಂಗಳಮುಖಿಯರ ಆಟಾಟೋಪ ಹೆಚ್ಚಾಗುತ್ತಿದೆ. ಕನಸಿನ ಮನೆ ಕಟ್ಟಿ ಗೃಹ ಪ್ರವೇಶ ಮಾಡುವಾಗಲೇ ಪ್ರವೇಶಿಸಿದ್ದ ಮೂವರು ಮಂಗಳಮುಖಿಯರು ಹೆಚ್ಚು ಹಣ ನೀಡುವಂತೆ ಪೀಡಿಸಿ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಸಂಬಂಧ ಮೂವರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನಸಿನ ಮನೆ ಕಟ್ಟಿ ಗೃಹ ಪ್ರವೇಶ ಮಾಡುವಾಗಲೇ ಪ್ರವೇಶಿಸಿದ್ದ ಮೂವರು ಮಂಗಳಮುಖಿಯರು ಹೆಚ್ಚು ಹಣ ನೀಡುವಂತೆ ಪೀಡಿಸಿ ಅಸಭ್ಯವಾಗಿ ವರ್ತಿಸಿರುವ ಪ್ರಕರಣ ಸಂಬಂಧ ಮೂವರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃತಿಕಾ, ಪ್ರಶಾಂತ್ ಆಲಿಯಾಸ್ ಪ್ರೀತಿ ಹಾಗೂ ಮಣಿಕಂಠನ್ ಆಲಿಯಾಸ್ ಪೂಜಾ ಬಂಧಿತ ಮಂಗಳಮುಖಿಯರು. ಇವರೆಲ್ಲರೂ ಶ್ರೀರಾಮಪುರದಲ್ಲಿ ವಾಸವಿದ್ದರು.
ವೈಯಾಲಿಕಾವಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ರಾಜೇಶ್- ದೀಪಾ ದಂಪತಿ ಕಟ್ಟಿದ್ದ ನೂತನ ಮನೆಯ ಗೃಹಪ್ರವೇಶದ ಹಿನ್ನೆಲೆಯಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿತ್ತು. ಆರೋಪಿಗಳ ಪೈಕಿ ಓರ್ವ ಮಂಗಳಮುಖಿ ಮನೆಗೆ ಆಗಮಿಸಿ ಹಣ ನೀಡುವಂತೆ ಕೇಳಿದ್ದಾಳೆ. ಮಾಲೀಕರು 200 ರೂಪಾಯಿ ಕೊಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಆಕೆ 200 ರೂಪಾಯಿ ಸಾಲುವುದಿಲ್ಲ, ಹೊರಗೆ ಮತ್ತಿಬ್ಬರಿದ್ದಾರೆ. ಹೆಚ್ಚು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.
ಸತತ ಮಾತುಕತೆಯ ಬಳಿಕ ಮನೆಯವರು 5 ಸಾವಿರ ರೂ ನೀಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಮಂಗಳಮುಖಿಯರು ಓರ್ವಳಿಗೆ 5 ಸಾವಿರದಂತೆ ಒಟ್ಟು 15 ಸಾವಿರ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರು ಹಾಗೂ ಮಂಗಳಮುಖಿಯರೊಂದಿಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಧರಿಸಿದ್ದ ಬಟ್ಟೆ ಎತ್ತಿ ಅನುಚಿತ ವರ್ತನೆ ತೋರಿ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದರು.
Laxmi News 24×7