Breaking News

ಮೈಸೂರು- ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತಗಳು ಸಂಭವಿಸಲು ಚಾಲಕರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಕಾರಣ ಎಂದ ಪ್ರತಾಪ್ ಸಿಂಹ

Spread the love

ಮೈಸೂರು- ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತಗಳು ಸಂಭವಿಸಲು ಚಾಲಕರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರು: ದಶಪಥ ಮೈಸೂರು- ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌ ವೇ ಅವೈಜ್ಞಾನಿಕವಾಗಿದ್ದು, ಇದು ಸಾವಿನ ಹೆದ್ದಾರಿಯಾಗಿದೆ ಎಂಬ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಇದು ರೇಸಿಂಗ್ ಟ್ರ್ಯಾಕ್ ಅಲ್ಲ, ಬೆಂಗಳೂರು- ಮೈಸೂರು ನಡುವೆ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುವ ಎಕ್ಸ್ಪ್ರೆಸ್ ಹೈವೇ. ಇದು ರೇಸಿಂಗ್ ಮಾಡೋಕೆ ಇರುವ ರಸ್ತೆಗಳಲ್ಲ, ಅದಕ್ಕಾಗಿ ಬೇರೆ ರಸ್ತೆಗಳಿವೆ ಎಂದು ತಿರುಗೇಟು ನೀಡಿದ್ದಾರೆ.

ಹೈವೇಯಲ್ಲಿ ಪ್ರತಿದಿನ ಅಪಘಾತಗಳಾಗುತ್ತಿವೆ. ಇದಕ್ಕೆ ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದೇ ಕಾರಣ ಎಂದು ಹೇಳಿದರೆ ಅಥವಾ ತೋರಿಸಿದರೆ ಎಂಜಿನಿಯರ್​ಗಳನ್ನು ಕರೆದುಕೊಂಡು ಬಂದು ಸರಿಮಾಡುತ್ತೇನೆ. ಅದನ್ನು ಬಿಟ್ಟು ಬರೀ ಹೆದ್ದಾರಿ ಅವೈಜ್ಞಾನಿಕ ಎಂದು ಹೇಳಿದ್ರೆ ಒಪ್ಪಲು ನಾವು ಸಿದ್ದವಿಲ್ಲ. ಹೆದ್ದಾರಿಯಲ್ಲಿ ಅಪಘಾತವಾಗಲು ಚಾಲಕರ ಬೇಜವಾಬ್ದಾರಿಯುತ ಚಾಲನೆಯೇ ಕಾರಣ ಎಂದರು.

ಅವೈಜ್ಞಾನಿಕ ಕಾಮಗಾರಿ ನಡೆದಿಲ್ಲ: ಹೆದ್ದಾರಿಯಲ್ಲಿ ಯಾವುದೇ ಅವೈಜ್ಞಾನಿಕ ಕಾಮಗಾರಿಗಳು ನಡೆದಿಲ್ಲ. ಹೆದ್ದಾರಿಯಲ್ಲಿ ಗರಿಷ್ಠ ವೇಗ 120 ಕಿಲೋಮೀಟರ್ ಆಗಿದೆ. ಸಣ್ಣಪುಟ್ಟ ಕಾರುಗಳಲ್ಲಿ ವೇಗವಾಗಿ ಹೋದರೆ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಿದರು. ಯಾರಾದರೂ ಇಂಜಿನಿಯರ್​ಗಳು ಈ ರಸ್ತೆ ಪ್ರಾಬ್ಲಮ್ ಇದೆ ಎಂದು ಹೇಳಲಿ. ಖಂಡಿತಾ ಅದನ್ನು ಸರಿಮಾಡುತ್ತೇವೆ. ಕೆಲವು ಅವಶ್ಯಕ ಸೌಲಭ್ಯ ಹಾಗೂ ಸಣ್ಣಪುಟ್ಟ ಕಾಮಗಾರಿಗಳು ನಡೆಯಬೇಕಿವೆ. ಶೀಘ್ರವೇ ಆ ಕೆಲಸ ಕೈಗೆತ್ತಿಕೊಳ್ಳುತ್ತೇವೆ. ಮಂಡ್ಯದಿಂದ ಮೈಸೂರಿನವರೆಗಿನ ಟೋಲ್ ಸಂಗ್ರಹ ಕಾರ್ಯ ಶೀಘ್ರ ಆರಂಭವಾಗಲಿದೆ. ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಎಕ್ಸ್ಪ್ರೆಸ್ ಹೈವೇಯನ್ನು ವೈಜ್ಞಾನಿಕವಾಗಿಯೇ ನಿರ್ಮಾಣ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.


Spread the love

About Laxminews 24x7

Check Also

ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – ಮಂಜುನಾಥ ಮಹಾರಾಜ.

Spread the loveಹುಕ್ಕೇರಿ : ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ