Breaking News

ಅಕ್ರಮ ಅಕ್ಕಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ : 48 ಕ್ವಿಂಟಲ್ 90 ಕೆಜಿ ಅಕ್ಕಿ ವಶ”

Spread the love

ಪೊಲೀಸ್ ಮತ್ತು ಆಹಾರ ನಾಗಲಿಕ ಸರಬರಾಜು ಇಲಾಖೆಯಿಂದ ಜಂಟಿ ಕಾರ್ಯಾಚರಣೆ ಅಕ್ರಮ ಅಕ್ಕಿ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ : 48 ಕ್ವಿಂಟಲ್ 90 ಕೆಜಿ ಅಕ್ಕಿ ವಶ”

ದಿನಾಂಕಃ 27/06/2023 ರಂದು ಬೆಳಗಾವಿ ಬ್ರಹ್ಮನಗರದ ಮಾರುತಿ ಮಂದಿರ ಹತ್ತಿರ ದೇವರಾಜ ಬಾಳಪ್ಪ ಬಾಳೆಕುಂದ್ರಿ (23) ಸಾಃಬೆನನಮರಡಿ ತಾಃಬೈಲಹೊಂಗಲ ಜಿ:ಬೆಳಗಾವಿ ಎಂಬುವವನು ತನ್ನ ಸ್ವಂತ ಪಾಯ್ದೆಗೋಸ್ಕರ ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆ ವತಿಯಿಂದ ಪಡಿತರ ಚೀಟಿದಾರರಿಗೆ ವಿತರಣೆ ಮಾಡುವಂತಹ ಅಕ್ಕಿಯನ್ನು ಎಲ್ಲಿಂದಲೋ ಅಕ್ರಮವಾಗಿ ತೆಗೆದುಕೊಂಡು ತನ್ನ ಸ್ವಂತ ಲಾಭಕ್ಕೋಸ್ಕರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಟಾಟಾ ಕಂಪನಿಯ ಗೂಡ್ಡ ವಾಹನ ಸಂಖ್ಯೆ ಕೆಎ-29/4247 ನೇದ್ದರಲ್ಲಿ ಅಕ್ಕಿ ಸಾಗಿಸುತ್ತಿದ್ದಾಗ ಸಹಾಯಕ ನಿರ್ದೇಶಕರು, ಆಹಾರ ಮತ್ತು ಸರಬರಾಜು ಹಾಗೂ ವ್ಯವಹಾರಗಳ ಇಲಾಖೆ, ಅನೌಪಚಾರಿಕ ಪಡಿತರ ಕ್ಷೇತ್ರ ಬೆಳಗಾವಿ ಹಾಗೂ ಉದ್ಯಮಬಾಗ ಪೊಲೀಸ್ ಠಾಣೆ ಇವರ ತಂಡ ಜಂಟಿಯಾಗಿ ದಾಳಿ ಮಾಡಿ ಆರೋಪಿ-ದೇವರಾಜ ಬಾಳಪ್ಪ ಬಾಳೆಕುಂದ್ರಿ ಈತನಿಂದ ರೂ.1,71,150/- ಮಾಲ್ಯದ 48 ಕ್ವಿಂಟಲ್ 90 ಕೆಜಿ ಅಕ್ಕಿಯನ್ನು ಮತ್ತು ಟಾಟಾ ಕಂಪನಿಯ ಗೂಡ್ಡ ವಾಹನವನ್ನು ವಶಪಡಿಸಿಕೊಂಡು ಪ್ರಕರಣದ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.


Spread the love

About Laxminews 24x7

Check Also

ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ

Spread the love ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ