Breaking News

ಸಣ್ಣ ಕಾರಣಕ್ಕೆ ಮಹಿಳಾ ಪ್ರಯಾಣಿಕರು ಕಂಡಕ್ಟರ್ನ ಕತ್ತು ಹಿಡಿದು ಎಳೆದಾಡಿದ

Spread the love

ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸ್ತ್ರೀ ಶಕ್ತಿ ಯೋಜನೆ ಸೌಂದತ್ತಿಯಲ್ಲಿ ವಿಪರಿತ ಪರಿಣಾಮವನ್ನು ಕಂಡಿದೆ. ಸಣ್ಣ ಕಾರಣಕ್ಕೆ ಮಹಿಳಾ ಪ್ರಯಾಣಿಕರು ಕಂಡಕ್ಟರ್ನ ಕತ್ತು ಹಿಡಿದು ಎಳೆದಾಡಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಹೌದು, ರಾಜ್ಯ ಸರ್ಕಾರದ ಸ್ತ್ರೀ ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಬಸ್ ಪ್ರಯಾಣ ಹೆಚ್ಚಿದ್ದು, ಬೆಳಗಾವಿ ಜಿಲ್ಲೆಯ ಸೌಂದತ್ತಿ ಯಲ್ಲಮ್ಮ ಬೆಟ್ಟದಲ್ಲಿ ಜೂನ್ 23 ರಂದು ಮಧ್ಯಾಹ್ನ ಸಣ್ಣ ವಿಚಾರಕ್ಕೆ ಮಹಿಳಾ ಪ್ರಯಾಣಿಕರು-ಕಂಡಕ್ಟರ್ ನಡುವೆ ಫ್ರೀಸ್ಟೈಲ್ ಜಗಳ ನಡೆದಿತ್ತು. ಮಹಿಳೆ ಕಂಡಕ್ಟರ್ ಕತ್ತು ಹಿಡಿದು ಎಳೆದಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೌಂದತ್ತಿ ಡಿಪೋದ ಬಸ್ ಕಂಡಕ್ಟರ್ ಮಹಿಳಾ ಪ್ರಯಾಣಿಕರಿಗೆ ಬೇಗ ಬಸ್ ಹತ್ತುವಂತೆ ಹೇಳಿದಾಗ ವಿವಾದ ಆರಂಭವಾಯಿತು. ಆ ವೇಳೆ ಕೆಲ ಮಹಿಳೆಯರು ಕಂಡಕ್ಟರ್ ನನ್ನು ಹಿಡಿದು ಹಲ್ಲೆಮಾಡಿರುವ ಘಟನೆ ಜರುಗಿದೆ ಮಹಿಳೆಯೊಬ್ಬರು ಕಂಡಕ್ಟರ್ ಕತ್ತು ಹಿಡಿದು ಎಳೆದಾಡಿದ್ದಾರೆ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಸಂಖ್ಯೆ ಕೆಎ 22 ಎಫ್ 1863 ರಲ್ಲಿ ಈ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್ ಬಸವರಾಜ ಭದ್ರಣ್ಣವರ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಕಂಡಕ್ಟರ್ ಮಹಿಳೆಯತ್ತ ಕೈ ಎತ್ತಿದ್ದು, ನಂತರ ಮಹಿಳಾ ಪ್ರಯಾಣಿಕರು ಕಂಡಕ್ಟರ್ಗೆ ಥಳಿಸಿದ್ದಾರೆ. .

ಈ ಬಗ್ಗೆ ಬಸ್ ಕಂಡಕ್ಟರ್ ಭದ್ರಣ್ಣನವರ್ ಮಾತನಾಡಿ, ಬಸ್ಸು ಬೇಗ ಏರಿ, ಬಸ್ಸು ಹೊರಡುವ ಹಂತದಲ್ಲಿದೆ ಎಂದಾಗ ಜಗಳ ಮಾಡಿ ಥಳಿಸಿದ್ದಾರೆ. ನನ್ನ 26 ವರ್ಷಗಳ ಸೇವಾವಧಿಯಲ್ಲಿ ಈ ರೀತಿ ಆಗಿರುವುದು ಇದೇ ಮೊದಲು. ನನ್ನ ತಪ್ಪಿಲ್ಲದಿದ್ದರೂ ಬಿಜಾಪುರದ ಆ ಮಹಿಳಾ ಪ್ರಯಾಣಿಕರು ನನ್ನನ್ನು ಥಳಿಸಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ಗಾಯಗೊಂಡ ಕಂಡಕ್ಟರ್ ಭದ್ರಣ್ಣನವರ್ ಸೌಂದತ್ತಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಂಡಕ್ಟರ್ ಮತ್ತು ಮಹಿಳಾ ಪ್ರಯಾಣಿಕರ ನಡುವಿನ ಈ ಹೊಡೆದಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ