ವರುಣನಿಗಾಗಿ ಹೋಳೆಯಮ್ಮ ದೇವಿಯನ್ನ ಪ್ರಾರ್ಥಿಸಿದ ಹುಕ್ಕೇರಿ ಶ್ರೀ ಗಳು
ಆಷಾಢ ಶುಕ್ರವಾರದ ಮೊದಲನೆ ಶುಕ್ರವಾರದಂದು ಹುಕ್ಕೇರಿ ತಾಲೂಕಿನ ಬಡಕುಂದ್ರಿ ಶ್ರೀ ಹೊಳೆಮ್ಮದೇವಿಯ ಸನ್ನಿಧಾನದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಹೋಳೆಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೆರಿಸಿ ಹಿರಣ್ಯಕೇಶಿ ನದಿಗೆ ಬಾಗಿನ ಅರ್ಪಿಸಿ ವರುಣನಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡುತ್ತಾ ಇವತ್ತು ಮಳೆಇಲ್ಲದೆ ಬೆಳೆಗಳು ಒಣಗಿ ರೈತರು ತುಂಬಾ ಬೇಸರದಲ್ಲಿದ್ದಾರೆ
ಹೋಳೆಯಮ್ಮ ತಾಯಿ ಶೀಘ್ರದಲ್ಲಿ ರೈತರಿಗೆ ಮಳೆಯನ್ನು ಅನುಗೃಹಿಸಲಿ ರೈತರು ಸುಖ ಶಾಂತಿ ನೆಮ್ಮದಿಯಿಂದ ಇರಲು ಆಶಿರ್ವದಿಸಬೇಕೆಂದು ವಿನಂಬ್ರದಿಂದ ಪ್ರಾರ್ಥಿಸಿದರು .
ಈ ಸಂದರ್ಭದಲ್ಲಿ ದೇವಸ್ಥಾನದ ದರ್ಮದರ್ಶಿ ಎಚ್ ಎಲ್ ಪೂಜಾರಿ ಗುರುಗಳು ಮಾತನಾಡುತ್ತಾ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪ್ರತಿಯೊಂದು ಸಂದರ್ಭದಲ್ಲಿ ಕೂಡ ಹೋಳೆಯಮ್ಮ
ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೆ ಇವತ್ತು ವರುಣನಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ತಾಯಿಯ ಅನುಗೃಹ ಆಗಿ ಎಲ್ಲರೂ ಕೂಡಾ ಸಂತಸದಿಂದ ಇರಲಿ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಶ್ರೀ ಗಳ ಹಸ್ತದಿಂದ ಸಿಹಿ ವಿತರಿಸಲಾಯಿತು..