Breaking News

ಆಯಪ್​ ಮೂಲಕ ನಕಲಿ ಷೇರು ಮಾರುಕಟ್ಟೆ ನಡೆಸುತ್ತಿದ್ದು, ಇದರ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಆರೋಪಿಯನ್ನು ಮುಂಬೈ ಕ್ರೈಂ ಬ್ರಾಂಚ್​ ಬಂಧಿಸಿದೆ.

Spread the love

 

ಮುಂಬೈ, ಮಹಾರಾಷ್ಟ್ರ: ಆರೋಪಿಯೊಬ್ಬನನ್ನು ಅಪರಾಧ ವಿಭಾಗದ 11ನೇ ಘಟಕ ಬಂಧಿಸಿದೆ.

ಆರೋಪಿಯನ್ನು ಜತಿನ್ ಸುರೇಶ್ ಭಾಯಿ ಮೆಹ್ತಾ (45) ಎಂದು ಗುರುತಿಸಲಾಗಿದೆ. ಸಂಕಡೆ ಬಿಲ್ಡಿಂಗ್ ಮಹಾವೀರ ನಗರದ ಕಾಂದಿವಲಿ ಪಶ್ಚಿಮದಲ್ಲಿ ವಾಸಿಸುತ್ತಿದ್ದ ಆರೋಪಿ ಜತಿನ್​ನಿಂದ 5 ಮೊಬೈಲ್ ಫೋನ್, 2 ಟ್ಯಾಬ್ಲೆಟ್, 1 ಲ್ಯಾಪ್ ಟಾಪ್, 1 ಪೇಪರ್ ಶ್ರೆಡರ್, 50 ಸಾವಿರ ನಗದು, 1 ರೂಟರ್, 1 ಪೆನ್ ಡ್ರೈವ್ ಸೇರಿದಂತೆ ಇತರ ವಸ್ತಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾರ್ಚ್ 2023 ರಿಂದ ಜೂನ್ 20, 2023 ರವರೆಗೆ ಈ ನಕಲಿ ಷೇರು ಮಾರುಕಟ್ಟೆ (ಡಬ್ಬಾ ಟ್ರೇಡಿಂಗ್) ಮೂಲಕ 4,672 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದರಲ್ಲಿ ಭದ್ರತಾ ವಹಿವಾಟು ತೆರಿಗೆ, ಬಂಡವಾಳ ಗಳಿಕೆ ತೆರಿಗೆ, ರಾಜ್ಯ ಸರ್ಕಾರದ ಮುದ್ರಾಂಕ ತೆರಿಗೆ, ಸೆಬಿ ವಹಿವಾಟು ತೆರಿಗೆ, ಷೇರುಪೇಟೆ ವಹಿವಾಟಿನ ಆದಾಯ 1 ಕೋಟಿ 95 ಲಕ್ಷದ 64 ಸಾವಿರದ 888 ರೂಪಾಯಿ ವಂಚನೆಯಾಗಿರುವುದು ತಿಳಿದುಬಂದಿದೆ.

ಆರೋಪಿಯು ಷೇರುಪೇಟೆಯಿಂದ ಯಾವುದೇ ಅನುಮತಿ ಪಡೆಯದೇ ಮೂಡೀಸ್ ಅಪ್ಲಿಕೇಶನ್ ಮೂಲಕ ನಗದು ವಹಿವಾಟಿನ ಮೇಲೆ ಷೇರುಪೇಟೆ ನಡೆಸುತ್ತಿದ್ದ ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ರಾಜ್ ತಿಲಕ್ ರೌಷನ್ ಹೇಳಿದ್ದಾರೆ.

ಮೂಡಿ ಅಪ್ಲಿಕೇಶನ್​​ ಮೂಲಕ ಅಕ್ರಮ ದಂಧೆ: ಜೂ.20ರಂದು ಮುಂಬೈ ಸೆಲ್​ನ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ವಿನಾಯಕ ಚವ್ಹಾಣ್ ಅವರಿಗೆ ಮಾಹಿತಿವೊಂದು ತಿಳಿದು ಬಂದಿತ್ತು. ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಮೂಡೀಸ್ ಅಪ್ಲಿಕೇಶನ್ ಮೂಲಕ ಅಕ್ರಮವಾಗಿ ವ್ಯಾಪಾರ ನಡೆಯುತ್ತಿರುವುದರ ಬಗ್ಗೆ ಪತ್ತೆ ಮಾಡಿದ್ದರು. ಸರ್ಕಾರಕ್ಕೆ ತೆರಿಗೆ ಕಟ್ಟದೇ ಆರೋಪಿಗಳು ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಅದರಂತೆ ಅವರು ಎರಡು ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿ ದಾಳಿ ನಡೆಸಿತು.

ಆರೋಪಿಗಳು ಭದ್ರತಾ ವಹಿವಾಟು ತೆರಿಗೆ, ಬಂಡವಾಳ ಗಳಿಕೆ ತೆರಿಗೆ, ರಾಜ್ಯ ಸರ್ಕಾರದ ಮುದ್ರಾಂಕ ಶುಲ್ಕ, ಸೆಬಿ ವಹಿವಾಟು ಶುಲ್ಕ, ಷೇರುಪೇಟೆ ವಹಿವಾಟಿನ ಆದಾಯ ಸೇರಿದಂತೆ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ವಂಚಿಸಿರುವುದು ಪತ್ತೆಯಾಗಿದೆ.

4,672 ಕೋಟಿ ವಹಿವಾಟು: ಈ ಆರೋಪಿಯು ವಹಿವಾಟಿಗೆ ಷೇರುಪೇಟೆಯ ಯಾವುದೇ ಪರವಾನಗಿ ಹೊಂದಿಲ್ಲ ಎಂಬುದು ಪತ್ತೆಯಾಗಿದೆ. ಆರೋಪಿಯು ಮೂಡಿ ಆಯಪ್ ಮೂಲಕ ಎಲ್ಲಾ ವ್ಯಾಪಾರ ವ್ಯವಹಾರಗಳನ್ನು ನಗದು ರೂಪದಲ್ಲಿ ತೆಗೆದುಕೊಳ್ಳುತ್ತಿದ್ದನು. ಇದಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ಯಾವುದೇ ತೆರಿಗೆ ಪಾವತಿಸುತ್ತಿರಲಿಲ್ಲ. ಆರೋಪಿಗಳ ಲ್ಯಾಪ್ ಟಾಪ್ ಪರಿಶೀಲನೆ ನಡೆಸಲಾಗಿದ್ದು, ಅದರಲ್ಲಿ ಅಕ್ರಮ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡುಬಂದಿದೆ. ಸದ್ಯ ಮುಂಬೈ ಕ್ರೈಂ ಬ್ಯಾಂಚ್​ ಆರೋಪಿಯನ್ನು ಸೆರೆ ಹಿಡಿದಿದ್ದು, ಆರೋಪಿಯ ವಿಚಾರಣೆ ಬಳಿಕ ಮತ್ತಷ್ಟ ಸತ್ಯಾಂಶ ಹೊರ ಬಿಳಲಿದೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆ ಚುರುಕುಗೊಳಿಸಿದ್ದಾರೆ.


Spread the love

About Laxminews 24x7

Check Also

ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

Spread the love ಬೀದರ್ : ಡ್ಯೂಟಿಗೆ ತಡವಾಗಿ ಬಂದಿರುವುದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್‌ಐ ಮೇಲೆ ಪೊಲಿಸ್ ಪೇದೆಯೊಬ್ಬ ಹಲ್ಲೆ ಮಾಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ