Breaking News

ಮಾನವ ಸಂಪನ್ಮೂಲ ನಮ್ಮ ದೇಶದ ಅತಿ ದೊಡ್ಡ ಶಕ್ತಿ : ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್

Spread the love

ನವದೆಹಲಿ : ಮಾನವ ಸಂಪನ್ಮೂಲ ನಮ್ಮ ದೇಶದ ಅತಿದೊಡ್ಡ ಶಕ್ತಿಯಾಗಿದೆ. ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರಿಗೆ ಜನರ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇತ್ತು.

ಇಂದು ದೇಶದ 1.4 ಬಿಲಿಯನ್​ ನಾಗರೀಕರನ್ನು ಸಶಕ್ತಗೊಳಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕಗೊಳಿಸುವುದು ನಮ್ಮ ಆದ್ಯತೆ ಆಗಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ಧೋವಲ್​ ಅಭಿಪ್ರಾಯಪಟ್ಟರು.

ಇಲ್ಲಿನ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM) ಆಯೋಜಿಸಿದ್ದ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ಸಂಪನ್ಮೂಲ ನಮ್ಮ ದೇಶದ ಅತಿದೊಡ್ಡ ಶಕ್ತಿಯಾಗಿದೆ. ಹೆಚ್ಚು ಪ್ರೇರಿತ ಮತ್ತು ಬದ್ಧತೆಯ ಕಾರ್ಯಪಡೆ ನಮ್ಮಲ್ಲಿದೆ. ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲು ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ನಾವು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೇಳಿದರು. ಎಲ್ಲೇ ಇರಿ, ಏನಾದರೂ ಮಾಡಿ, ನೀವು ಮಾಡುವ ಕಾರ್ಯವನ್ನು ನಿನ್ನೆಗಿಂತ ಉತ್ತಮವಾಗಿ ಮಾಡಿ. ಈ ಮೂಲಕ ಜೀವನದ ಎಲ್ಲಾ ಆಯಾಮಗಳಲ್ಲೂ ನಿರಂತರ ಸುಧಾರಣೆಗೆ ಮುಂದಾಗಿ ಎಂದು ಕರೆ ನೀಡಿದರು.

ವಿದೇಶದಲ್ಲಿರುವ ಭಾರತೀಯರ ಕೊಡುಗೆ ಬಗ್ಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿನ ಕಾರ್ಮಿಕರು ಮಾತ್ರವೇ ನಮ್ಮ ಆರ್ಥಿಕತೆಗೆ ನೂರು ಬಿಲಿಯನ್​ಗಿಂತ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ ನಾವು ಜಾಗತಿಕವಾಗಿ ಸ್ಪರ್ಧಾತ್ಮಕವಾಗಬೇಕಾದ ಅಗತ್ಯತೆ ಇದೆ. ಇದಕ್ಕಾಗಿ ನಮ್ಮ ಜನರು ಮತ್ತು ಕಂಪನಿಗಳು ಇನ್ನಷ್ಟು ಶ್ರಮ ಪಡಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆಯಲು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ದೇಶಕ್ಕೆ ಸ್ಪೂರ್ತಿದಾಯಕ ವ್ಯಕ್ತಿಗಳ ಅಗತ್ಯವಿದೆ. ಅವರು ವೈಯಕ್ತಿಕ ಹಿತಾಸಕ್ತಿಗಳಿಂದ ಹೊರತಾಗಿ ದುಡಿಯುತ್ತಾರೆ. ಇಂತಹ ವ್ಯಕ್ತಿಗಳು ವ್ಯವಹಾರ ಮತ್ತು ಉದ್ಯಮಗಳಲ್ಲಿ ಉನ್ನತ ಮಟ್ಟದ ಸಾಧನೆಯಲ್ಲಿ ತೊಡಗುತ್ತಾರೆ. ಇಂದು ರಾಷ್ಟ್ರಕ್ಕೆ ಪ್ರಮುಖವಾಗಿ ಬೇಕಾಗಿರುವುದು ಸಮರ್ಪಣಾ ಭಾವ ಎಂದರು.

“ಸುಭಾಷ್​ ಚಂದ್ರ ಬೋಸ್‌ ಅವರು ತುಂಬಾ ಧೈರ್ಯಶಾಲಿಯಾಗಿದ್ದರು. ಹದಿಹರೆಯದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದರು. ಇವರ ದಿಟ್ಟತನವು ಐಸಿಎಸ್​​ಗಾಗಿ ಲಂಡನ್‌ಗೆ ಪ್ರಯಾಣ ಮಾಡುವುದರಿಂದ ಹಿಡಿದು ಭಾರತದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳುವವರೆಗಿನ ಜೀವನದಿಂದ ತಿಳಿದುಬರುತ್ತದೆ.

ನೇತಾಜಿ ಅವರು ವಿಶಿಷ್ಟ ನಾಯಕತ್ವದ ಗುಣವನ್ನು ಹೊಂದಿದ್ದರು. ಅವರ ಸಾಮರ್ಥ್ಯವು ವಿವಿಧ ಹಿನ್ನೆಲೆಯ ಜನರನ್ನು ಒಂದುಗೂಡಿಸುತ್ತಿತ್ತು ಮತ್ತು ಏಕೀಕೃತ ಭಾರತ ನಿರ್ಮಾಣ ಮಾಡುವಂತಿತ್ತು. ಬೋಸ್ ಅವರ ನಾಯಕತ್ವವು ಅಸಾಧಾರಣವಾಗಿದೆ. ಅವರು ಜಾತಿ, ಧರ್ಮ ಮತ್ತು ಜನಾಂಗದ ಎಲ್ಲೆಗಳನ್ನು ಮೀರಿ ಭಾರತವನ್ನು ಶ್ರೇಷ್ಠ ಎಂದು ಪ್ರತಿಪಾದಿಸಿದರು. ಬೋಸ್​ ಅವರ ದೇಶಭಕ್ತಿ, ಆದರ್ಶಗಳು ಮತ್ತು ಭವ್ಯ ಭಾರತಕ್ಕಾಗಿ ಉತ್ತೇಜಿಸಲ್ಪಟ್ಟಿದ್ದವು. ಅವರ ನಿಧನದ ನಂತರವೂ ಅವರ ಪ್ರಭಾವ ಇಂದಿಗೂ ಮುಂದುವರೆದಿದೆ. ಅವರ ಅಸಾಧಾರಣ ಸಾಧನೆಯಿಂದ ಅಸಂಖ್ಯಾತ ಭಾರತೀಯರು ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳಿದರು


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ