Breaking News

ಗೃಹ ಜ್ಯೋತಿ: ಬಾಡಿಗೆದಾರರು ವಾಸದ ವಿಳಾಸಕ್ಕೆ ಆಧಾರ್ ಲಿಂಕ್​ ಮಾಡುವುದು ಕಡ್ಡಾಯ: ಮತ್ತೆ ಗೊಂದಲ?

Spread the love

ಬೆಂಗಳೂರು : ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳ ಸಂಬಂಧ ಏರ್ಪಟ್ಟ ಗೊಂದಲಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಬಾಡಿಗೆದಾರರು ತಮ್ಮ ವಾಸದ ಮನೆ ವಿಳಾಸಕ್ಕೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಷರತ್ತು ಹಾಕಿದೆ. ಆದರೆ, ಈ ಸ್ಪಷ್ಟೀಕರಣದ ಷರತ್ತು ಇದೀಗ ಬಾಡಿಗೆದಾರರಲ್ಲಿ ಮತ್ತಷ್ಟು ಗೊಂದಲ ಉಂಟಾಗುವಂತೆ ಮಾಡಿದೆ.

ಉಚಿತ 200 ಯೂನಿಟ್ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಬಗ್ಗೆ ಫಲಾನುಭವಿಗಳಲ್ಲಿ ಸಾಕಷ್ಟು ಅನುಮಾನ, ಗೊಂದಲ ಏರ್ಪಟ್ಟಿತ್ತು.‌ ಈ ಗೊಂದಲಗಳಿಗೆ ತೆರೆ ಎಳೆಯುವ ಸಂಬಂಧ ಸ್ಪಷ್ಟೀಕರಣದ ರೂಪದಲ್ಲಿ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿದೆ. ಪ್ರಮುಖವಾಗಿ ಬಾಡಿಗೆದಾರರಿಗೆ ಗೃಹ ಜ್ಯೋತಿ ಯೋಜನೆ ಸಿಗುವ ಬಗ್ಗೆ ಸಾಕಷ್ಟು ಗೊಂದಲ ಏರ್ಪಟ್ಟಿತ್ತು.‌

ಈ ಮುಂಚೆ ಹೊರಡಿಸಿದ್ದ ಆದೇಶದನ್ವಯ ಬಾಡಿಗೆದಾರರು ಉಚಿತ ವಿದ್ಯುತ್ ಯೋಜನೆಯಿಂದ ವಂಚಿತರಾಗುವ ಗೊಂದಲ ಕಂಡುಬಂದಿತ್ತು. ಆದರೆ, ಬಳಿಕ ಸಿಎಂ ಸಿದ್ದರಾಮಯ್ಯ ಬಾಡಿಗೆದಾರರಿಗೂ ಯೋಜನೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದರು‌.

ಇದೀಗ ಇಂಧನ ಇಲಾಖೆ ಕೆಲ ಸ್ಪಷ್ಟೀಕರಣ ನೀಡಿದ್ದು, ಗೊಂದಲ ನಿವಾರಿಸಲು ಯತ್ನಿಸಿದೆ. ಆದರೂ ಬಾಡಿಗೆದಾರಿಗೆ ಗೃಹ ಜ್ಯೋತಿ ಸಿಗುವುದು ಮತ್ತೆ ಗೊಂದಲದಲ್ಲೇ ಇದೆ. ಬಾಡಿಗೆದಾರನು ವಾಸದ ಮನೆ ವಿಳಾಸಕ್ಕೆ ಆಧಾರ್ ಕಾರ್ಡ್ ಜೋಡಿಸಿದ್ದರೆ ಮಾತ್ರ ಯೋಜನೆ ಅನ್ವಯವಾಗಲಿದೆ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ. ಈ ಅಂಶವೇ ಬಾಡಿಗೆದಾರರಿಗೆ ಮತ್ತಷ್ಟು ಗೊಂದಲ ಉಂಟಾಗುವಂತೆ ಮಾಡಿದೆ.

ಇಲಾಖೆ ನೀಡಿರುವ ಸ್ಪಷ್ಟೀಕರಣದ ಆದೇಶದಲ್ಲಿ ಗೃಹ ಜ್ಯೋತಿ ಪಡೆಯಲು ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಅದರಂತೆ ಗೃಹ ವಿದ್ಯುತ್‌ ಬಳಕೆದಾರರು ಬಾಡಿಗೆದಾರರಾಗಿದ್ದಲ್ಲಿ, ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿ ನೋಂದಾಯಿಸುವ ಮೂಲಕ ಸದರಿ ಸೌಲಭ್ಯ ಪಡೆಯಬಹುದು ಎಂದು ತಿಳಿಸಲಾಗಿದೆ. ಆದರೆ, ಬಹುತೇಕ ಬಾಡಿಗೆದಾರರು ಬಾಡಿಗೆ ವಾಸದ ಮನೆಯ ವಿಳಾಸಕ್ಕೆ ಆಧಾರ್ ಕಾರ್ಡ್ ಹೊಂದಿರುವುದಿಲ್ಲ. ತಮ್ಮ ತವರೂರಿನ ಅಥವಾ ಬೇರೆ ನಿವಾಸ ವಿಳಾಸದಲ್ಲಿ ಆಧಾರ್ ಹೊಂದಿರುತ್ತಾರೆ.

ಇಲಾಖೆ ನೀಡಿದ ಸ್ಪಷ್ಟೀಕರಣದಲ್ಲಿ ಬಾಡಿಗೆದಾರರು ವಾಸದ ಮನೆ ವಿಳಾಸಕ್ಕೆ ಆಧಾರ್ ಸಂಖ್ಯೆ ಜೋಡಿಸಬೇಕೆಂಬ ಅಂಶ ಇದೀಗ ಬಾಡಿಗೆದಾರರಿಗೆ ಯೋಜನೆ ಅನ್ವಯವಾಗುವುದಿಲ್ಲವೇ ಎಂಬ ಅನುಮಾನ, ಗೊಂದಲ ಮತ್ತೆ ಮೂಡಿಸಿದೆ. ಹಾಗಾಗಿ, ಬಾಡಿಗೆ ಇರುವ ವಾಸದ ಮನೆ ವಿಳಾಸಕ್ಕೆ ಆಧಾರ್ ಸಂಖ್ಯೆ ಜೋಡಣೆ ಆಗಿಲ್ಲದಿದ್ದರೆ ಗೃಹ ಜ್ಯೋತಿ ಕೈ ತಪ್ಪುತ್ತಾ ಎಂಬ ಗೊಂದಲ ಉಂಟಾಗಿದೆ.

ಉಳಿದ ಸ್ಪಷ್ಟೀಕರಣ ಏನು?:

  • 200 ಯೂನಿಟ್​ಗಳ ಬಳಕೆಯ ಮಿತಿಯನ್ನು ಯಾವುದಾದರು ತಿಂಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್​ ಪಾವತಿಸಿ, ಯೋಜನೆಯಲ್ಲಿ ಮುಂದುವರಿಯಬಹುದು.
  • ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹ ಬಳಕೆದಾರರು ಸರಾಸರಿ ಬಳಕೆಯ ಮಾಸಿಕ 53 ಯೂನಿಟ್‌ಗಳಾಗಿರುವುದರಿಂದ 53 ಯೂನಿಟ್‌ಗಳನ್ನೇ ನಿರ್ಧರಿಸಿ ಈ ಯೋಜನೆ ಸೌಲಭ್ಯ ಲಭಿಸಲಿದೆ.
  • Multi Stored Apartment ಗಳಲ್ಲಿ ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲಾ ಮನೆಗಳಿಗೆ ಈ ಯೋಜನೆ ಅನ್ವಯಿಸಲಿದೆ.

Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ