ಗೋಕಾಕ:ಗೋಕಾಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಳಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ NHM ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಸಿಬ್ಬಂದಿಗಳು ಹಾಗೂ ವೈದ್ಯರು ಸರಕಾರಕ್ಕೆ ತಮ್ಮ ಕೂಗು ನಿಲುಕಲಿ ಎಂದು ದಿನದ ಕರ್ತವ್ಯ ನಿಭಾಯಿಸುತ್ತಲೇ ಸಮವಸ್ತ್ರದಲ್ಲಿದ್ದೂ ರಟ್ಟೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಿ. ಈ ಮೂಲಕ ಮನವಿ ಕೂಡ ಅರ್ಪಿಸಿದರು.
ಸಮಾನ ವೇತನ, ಸೇವಾಭದ್ರತೆ ಹಾಗೂ ಇನ್ನಿತರ ವಿಷಯಗಳನ್ನು ಇಟ್ಟುಕೊಂಡು ಮೇಣದ ಬತ್ತಿ ಹಚ್ಚಿ, ಭಿತ್ತಿಚಿತ್ರ ಪ್ರದರ್ಶಿಸುತ್ತ ಸರಕಾರವನ್ನು ಎಚ್ಚರಿಸಿದರು. ಈ ಬಗ್ಗೆ NHM ಸಿಬ್ಬಂದಿಯ ಭಾರತಿ ಕೋಳಿ ಮಾತನಾಡಿ ಬಹಳ ವರ್ಷಗಳಿಂದ ಈ ಮೂಲಭೂತ ಅನುಕೂಲತೆಗಾಗಿ ನಾವುಗಳು ಒಗ್ಗಟ್ಟಿನಿಂದ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರೂ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುವುದು ಮರೀಚಿಕೆಯಾಗಿಯೇ ಉಳಿದಿದೆ ಎಂದು ತಮ್ಮ ನೋವನ್ನು ಹೇಳಿದರು.
ನಮ್ಮ ಬೇಡಿಕೆಗಳನ್ನು ಸರಕಾರವು ಈಡೇರಿಸದಿದ್ದರೆ ಮೇ 21 ನಂತರ ರಾಜ್ಯಾದ್ಯಂತ ಕೊರೋನಾ ವಾರಿಯರ್ಸ್ ಸೇವೆಯು ಅಲಭ್ಯವಾಗುತ್ತದೆ ಮನೆಯಲ್ಲಿ ಕುಳಿತು ಪ್ರತಿಭಟನೆ ಮಾಡಲಾಗುತ್ತದೆ.