ಕಳ್ಳತನ ಮಾಡುತ್ತಿರುವುದನ್ನು ನೋಡಿದ 9 ವರ್ಷದ ಪುಟ್ಟ ಬಾಲಕಿಯನ್ನು ದುಷ್ಕರ್ಮಿಯೋರ್ವ ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ಘಟನೆ ನಡೆದಿದೆ.
ಬಾಲಕಿ ನಾಪತ್ತೆಯಾದ ಬಳಿಕ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಮನೆಯೊಳಗಿನ ಸ್ಟೋರ್ ರೂಮ್‌ನಲ್ಲಿ ಬಟ್ಟೆಯಿಂದ ಸುತ್ತಿಟ್ಟ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಬಾಲಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ಬೆನ್ನಟ್ಟಿದ ಪೊಲೀಸರು 19 ವರ್ಷದ ತರುಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಇನ್ನು ಆಕೆಯ ಮನೆಯಲ್ಲಿ ಹಣ ಕದಿಯುವುದನ್ನು ಬಾಲಕಿ ಗಮನಿಸಿದ ಬಳಿಕ ಕಳ್ಳ, ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.