Breaking News

ಮಾಂಜರಿ ಗ್ರಾಮದಲ್ಲಿ ನಿವೃತ್ತ ಯೋಧರಿಗೆ ಭರ್ಜರಿ ಸ್ವಾಗತ

Spread the love

ಚಿಕ್ಕೋಡಿ ತಾಲೂಕಿನ ‌ಮಾಂಜರಿ ಗ್ರಾಮದಲ್ಲಿ ಸೇನೆಯಿಂದ ನಿವೃತ್ತಿಯನ್ನು ಪಡೆದ ಯೋಧರಿಗೆ ತೆರೆದ ವಾಹನದಲ್ಲಿ ಪುಷ್ಪವೃಷ್ಠಿಯ ಮೂಲಕ ಅದ್ದೂರಿಯಾಗಿ ಸ್ವಾಗತವನ್ನು ‌ಕೋರಲಾಯಿತು.

ನಿವೃತ್ತ ಯೋಧರಾದ ರಾವಸಾಹೇಬ ಲಗಡೆ ಹಾಗೂ ಸಂತೋಷ ಪೂಜಾರಿಯವರನ್ನು ಮಾಂಜರಿ,ಮಾಂಜರಿವಾಡಿ ಗ್ರಾಮದ ನಿವೃತ್ತ ಯೋಧರು ಹಾಗೂ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತವನ್ನು ಕೋರಿದರು.ಮಾಂಜರಿ ಗ್ರಾಮದ ಹೊಸ ಬಸ್ ನಿಲ್ದಾಣದ ಮೂಲಕ ನಿವೃತ್ತ ಯೋಧರಿಗೆ ಹೂವು‌ ಮಳೆಯನ್ನು ಸುರಿಸಿ,ಪಟಾಕಿ ಸಿಡಿಸಿ,ವಿವಿಧ ರೀತಿಯ ವಾದ್ಯದೊಂದಿಗೆ ತೆರೆದ ವಾಹನದಲ್ಲಿ ಸ್ವಾಗತಿಸಿಕೊಳ್ಳಲಾಯಿತು.

ಇದೇ ಸಂಧರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಾಸಾಹೇಬ ಯಾದವ ಮಾತನಾಡಿ ದೇಶದ ಸೇವೆ ಮಾಡುವ ಸೈನಿಕರು ಹತ್ತುಹಲವಾರು ರೀತಿಯ ಕಷ್ಟಗಳನ್ನು ಅನುಭವಿಸುತ್ತಾರೆ.ಇಂತಹ ಯೋಧರ ಬಗ್ಗೆ ಪ್ರತಿಯೊಬ್ಬರೂ ಅಭಿಮಾನವನ್ನು ಇಟ್ಟುಕೊಳ್ಳಬೇಕು ಎಂದರು.ನಂತರ ಗ್ರಾಮ ಪಂಚಾಯತ ಅಧ್ಯಕ್ಷ ಪಾಂಡುರಂಗ ಮಾನೆ ಮಾತನಾಡಿ ದೇಶಕ್ಕಾಗಿ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿದ ಯೋಧರು ಇವತ್ತು ನಮ್ಮ ಗ್ರಾಮಕ್ಕೆ ಆಗಮಿಸಿರುವುದು ಸಂತಸ ಸಂಗತಿ.ಮುಂದೆ ಅವರು ಗ್ರಾಮದ ಯುವಕರಿಗೆ ಸೈನಿಕ ತರಬೇತಿಯನ್ನು ನೀಡಿ,ಗ್ರಾಮದ ಹೆಚ್ಚಿನ ಯುವಕರನ್ನು ಸೈನ್ಯಕ್ಕೆ ಕಳುಹಿಸುವುಲ್ಲಿ ಪ್ರಮುಖವಾದ ಪಾತ್ರವನ್ನು ವಹಿಬೇಕು ಎಂದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಕಲ್ಲಪ್ಪಣಾ ಮಗೆನ್ನವರ,ಶೀತಲ ಯಾದವ,ದೀಲಿಪ ಪವಾರ,ಶಶಿಕಾಂತ ಪಾಟೋಳೆ,ಸಂಜಯ ನಾಂದ್ರೆ,ಸುರೇಶ ರೆಂದಾಳೆ,ಬಾಬು ಪಾತರವಾಟ,ವಿನೋದ ತೋರಸೆ,ಸಂದೀಪ ರೋಡೆ,ಶ್ರೀಧರ ಭೋಜಕರ,ಡಾ! ಜಿ.ಬಿ.ಮಾನೆ,ಚಂದು ಮಾನೆ,ರವಿ ಯಾದವ,ಪಾಂಡುರಂಗ ಯಾದವ,ಮಲ್ಹಾರಿ ಯಾದವ ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು…


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ