Breaking News

ರಾಜ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಕರೆಂಟ್ ಬಿಲ್ ಕಟ್ಟಲು ಹಿಂದೇಟು

Spread the love

ಧಾರವಾಡ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಅಧಿಕಾರಕ್ಕೆ ಬರುವ ಮುನ್ನ ಜೂ.1 ನೇ ತಾರೀಖಿನಿಂದ ಯಾರೂ ಕರೆಂಟ್ ಬಿಲ್ ಕಟ್ಟೋಹಾಗಿಲ್ಲ ಎಂದು ಹೇಳಿದ್ದೇ ಹೇಳಿದ್ದು, ರಾಜ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ ಅಲ್ಲದೇ ಬಿಲ್ ಪಾವತಿಸಿಕೊಳ್ಳಲು ಬರುವ ಕೆಇಬಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲೂ ಗ್ರಾಮಸ್ಥರು ಲೈನ್‌ಮ್ಯಾನ್ ಒಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕರೆಂಟ್ ಬಿಲ್ ಕೊಡಲು ಬಂದ್ ಸಿಬ್ಬಂದಿಯನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಬಿಲ್ ಕಟ್ಟುವುದಿಲ್ಲ ನಮಗೆ ಬಿಲ್ ಕೊಡಬೇಡ. ಗ್ರಾಮಸ್ಥರು ಬಿಲ್ ಕಟ್ಟೋದಿಲ್ಲ ಎಂದು ನಿಮ್ಮ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಹೇಳು. ಬಿಲ್ ಕೊಡಲು ನಮ್ಮ ಮನೆಗಳಿಗೆ ಬರಬೇಡ ಎಂದು ಗ್ರಾಮಸ್ಥರು ಕೆಇಬಿ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ ಆತನ ಕೈಯಲ್ಲಿದ್ದ ಬಿಲ್ ಬುಕ್ ಕೂಡ ಕಸಿದುಕೊಳ್ಳಲು ಯತ್ನಿಸಿದ ಪ್ರಸಂಗ ನಡೆದಿದೆ


Spread the love

About Laxminews 24x7

Check Also

ನಿವೃತ್ತಿ ಹೊಂದಲು ಕೇವಲ ಮೂರು ದಿನ ಬಾಕಿ ಇರುವಾಗಲೇ ಹಿರಿಯ ಐಪಿಎಸ್ ಅಧಿಕಾರಿ ನಿಧನ ಹೊಂದಿರುವ ಘಟನೆ ನಡೆದಿದೆ. 

Spread the loveನಿವೃತ್ತಿ ಹೊಂದಲು ಕೇವಲ ಮೂರು ದಿನ ಬಾಕಿ ಇರುವಾಗಲೇ ಹಿರಿಯ ಐಪಿಎಸ್ ಅಧಿಕಾರಿ ನಿಧನ ಹೊಂದಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ