ಬೆಂಗಳೂರು: ನಗರದ ಮಹದೇವಪುರದಲ್ಲಿ ಮೇ 25ರಂದು ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ರೇಣುಕುಮಾರ್ ಹತ್ಯೆಯ ದೃಶ್ಯ ವೈರಲ್ ಆಗುತ್ತಿದೆ(Murder). ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಹತ್ಯೆಯ ದೃಶ್ಯಗಳು ಎಂತವರನ್ನೂ ಬೆಚ್ಚಿಬೀಳಿಸುವಂತಿವೆ. ರೇಣುಕುಮಾರ್(Rowdy Sheeter Renukumar) ಸಹಚರರಾದ ಶ್ರೀಕಾಂತ್ ಹಾಗೂ ಪ್ರಶಾಂತ್ ಇಬ್ಬರು ಸೇರಿಕೊಂಡು ಹತ್ಯೆ ಮಾಡಿದ್ದರು. 40 ಸೆಕೆಂಡ್ನಲ್ಲಿ 26 ಬಾರಿ ಕೊಚ್ಚಿ ರೌಡಿಶೀಟರ್ ಬರ್ಬರ ಕೊಲೆ ಮಾಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಮ್ಕಿ ಹಾಕಿದ ಎಂಬ ಕಾರಣಕ್ಕೆ ಕೊಲೆ
ಈ ಹಿಂದೆ ಜೈಲಿನಿಂದ ಹೊರಬಂದ ರೇಣುಕುಮಾರ್ ತನ್ನ ಸಹಚರರಿಗೆ ಧಮ್ಕಿ ಹಾಕಿದ್ದ. ನಾನು ಜೈಲಿನಲ್ಲಿದ್ದಾಗ ಏರಿಯಾದಲ್ಲಿ ನಿಮ್ಮ ಹವಾ ಜಾಸ್ತಿಯಾಗಿದೆ. ನೀವು ನನ್ನ ಶಿಷ್ಯಂದಿರು, ಇನ್ಮುಂದೆ ಏನು ಮಾಡಬೇಕಾದರೂ ನನ್ನ ಪರ್ಮಿಷನ್ ತೆಗೆದುಕೊಳ್ಳಬೇಕೆಂದು ಪ್ರಶಾಂತ್, ಶ್ರೀಕಾಂತ್ಗೆ ಧಮ್ಕಿ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಸಹಕರರು ಪ್ಲಾನ್ ಮಾಡಿ ಅಟ್ಯಾಕ್ ಮಾಡಿದ್ದಾರೆ. ಕೇವಲ 40 ಸೆಕೆಂಡ್ನಲ್ಲಿ 26 ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
Laxmi News 24×7